* ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೊದಲ ಮಹಿಳಾ ನಿರ್ದೇಶಕಿಯನ್ನಾಗಿ " ಪಿ ಎ ಸೀಮಾ " ಅವರನ್ನು ನೇಮಕ ಮಾಡಲಾಗಿದೆ. ಇದೇ ಮೊದಲ ಬಾರಿಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೊದಲ ಮಹಿಳಾ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.
* ಈ ಮುಂಚೆ ಆನೆ ಕಾರ್ಯಪಡೆ ಡಿ ಸಿ ಎಫ್ ಆಗಿದ್ದ ಪಿ.ಎ ಸೀಮಾ ಅವರು ಕೆ.ಆರ್ ನಗರದಲ್ಲಿ ಕಾಡಾನೆ ಹಿಮ್ಮೆಟ್ಟಿಸುವ ಕಾರ್ಯಚರಣೆ ಮೂಲಕ ಗಮನ ಸೆಳೆದಿದ್ದರು. ಸೀಮಾ ಅವರೊಂದಿಗೆ ಮೈಸೂರು ವಿಭಾಗದಲ್ಲಿ ಪ್ರಮುಖ ಹುದ್ದೆ ನಿಭಾಯಿಸುತ್ತಿರುವ ಮಹಿಳಾ ಅಧಿಕಾರಿಗಳ ಸಂಖ್ಯೆ ಮೂರಕ್ಕೆ ಏರಿದೆ.
* ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ " ಡಾ. ಮಾಲತಿ ಪ್ರೀಯಾ " &  ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿಯಾಗಿ " ದೀಪಾ ಜೇ ಕಂಟ್ರಾಕ್ಟರ್ " ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
* ಕರ್ನಾಟಕದ 5 ಹುಲಿ ಸಂರಕ್ಷಿತ ಪ್ರದೇಶಗಳು :
- ಬಂಡೀಪುರ - ಚಾಮರಾಜನಗರ.
- ಭದ್ರಾ - ಚಿಕ್ಕ ಮಗಳೂರು.
- ದಾಂಡೇಲಿ / ಅಂಶಿ - ಉತ್ತರಕನ್ನಡ
- ಬಿಳಿಗಿರಿ ರಂಗನ ಬೆಟ್ಟ  - ಚಾಮರಾಜನಗರ 
- ನಾಗರಹೊಳೆ - ಕೊಡಗು / ಮೈಸೂರು
- ಹುಲಿ ಯೋಜನೆ ಜಾರಿಗೆ ಬಂದ ವರ್ಷ - 1973