- ಭಾರತದಲ್ಲಿ ನಂಬರ್ 1 ಸ್ಥಾನ: ಬ್ರ್ಯಾಂಡ್ ಫೈನಾನ್ಸ್ ಇಂಡಿಯಾ 100 ವರದಿಯ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಹಣಕಾಸಿನ ಮೌಲ್ಯ, ಗ್ರಾಹಕರ ವಿಶ್ವಾಸ ಮತ್ತು ಮಾರುಕಟ್ಟೆಯ ಬಲದ ಆಧಾರದ ಮೇಲೆ MRF ಮೊದಲ ಸ್ಥಾನದಲ್ಲಿದೆ.
- ಟಾಪ್ 50 ಬ್ರ್ಯಾಂಡ್‌ಗಳಲ್ಲಿ ಸ್ಥಾನ: ಭಾರತದ ಎಲ್ಲಾ ವಲಯಗಳ (ಬ್ಯಾಂಕಿಂಗ್, ತಂತ್ರಜ್ಞಾನ, ಟೆಲಿಕಾಂ ಇತ್ಯಾದಿ) ಒಟ್ಟಾರೆ ಪ್ರಮುಖ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ MRF ಅಗ್ರ 50ರ ಒಳಗಡೆ ಸ್ಥಾನ ಗಿಟ್ಟಿಸಿಕೊಂಡಿದೆ.
- ಜಾಗತಿಕ ಮಟ್ಟದಲ್ಲಿ ತೃತೀಯ ಸ್ಥಾನ: ಕೇವಲ ಭಾರತದಲ್ಲಷ್ಟೇ ಅಲ್ಲದೆ, ಜಾಗತಿಕ ಮಟ್ಟದ 'ಬ್ರ್ಯಾಂಡ್ ಫೈನಾನ್ಸ್ ಟೈರ್ಸ್ 25 - 2026' ಶ್ರೇಯಾಂಕದಲ್ಲಿ MRF ವಿಶ್ವದ 3ನೇ ಅತ್ಯಂತ ಬಲವಾದ ಟೈರ್ ಬ್ರ್ಯಾಂಡ್ ಎಂಬ ಹೆಮ್ಮೆಯ ಸಾಧನೆ ಮಾಡಿದೆ.
- ಬ್ರ್ಯಾಂಡ್ ಸಾಮರ್ಥ್ಯ ಸೂಚ್ಯಂಕ (BSI Score): ಜಾಗತಿಕ ಮಟ್ಟದಲ್ಲಿ MRF ಕಂಪನಿಯು 100ಕ್ಕೆ 87.7 ಬ್ರ್ಯಾಂಡ್ ಸ್ಟ್ರೆಂತ್ ಇಂಡೆಕ್ಸ್ (BSI) ಅಂಕಗಳನ್ನು ಪಡೆದುಕೊಂಡಿದೆ.
➤ MRF (ಮದ್ರಾಸ್ ರಬ್ಬರ್ ಫ್ಯಾಕ್ಟರಿ) ಲಿಮಿಟೆಡ್ ಎಂಬುದು 1946 ರಲ್ಲಿ ಸ್ಥಾಪನೆಯಾದ, ತಮಿಳುನಾಡಿನ ಚೆನ್ನೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಹಾಗೂ ಕ್ರೀಡಾ ಪ್ರೋತ್ಸಾಹಕ್ಕೆ ಹೆಸರಾಗಿರುವ ಭಾರತದ ಅತಿ ದೊಡ್ಡ ಮುಂಚೂಣಿ ಟೈರ್ ತಯಾರಿಕಾ ಸಂಸ್ಥೆಯಾಗಿದೆ.
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ