* ಜಾಗತಿಕವಾಗಿ ಹೆಚ್ಚುತ್ತಿರುವ mpox (ಮಂಕಿ ಫಾಕ್ಸ್) ಪ್ರಕರಣಗಳು ಭಾರತದಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಆಫ್ರಿಕಾ, ಥೈಲ್ಯಾಂಡ್, ಪಾಕಿಸ್ತಾನ ಮತ್ತು ಫಿಲಿಪೈನ್ಸ್‌ನಂತಹ ದೇಶಗಳು ಈಗಾಗಲೇ ತೀವ್ರವಾಗಿ ಬಾಧಿತವಾಗಿವೆ
* ಆಗಸ್ಟ್ 14 ರಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮಂಕಿ ಫಾಕ್ಸ್ ಅನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ್ದು, ವೈರಸ್‌ನ ಹೊಸ ತಳಿ, ಕ್ಲೇಡ್ I, ಹೆಚ್ಚು ಹರಡುತ್ತದೆ ಮತ್ತು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ.
* ಭಾರತವು mpox ಅನ್ನು ಎದುರಿಸಲು ಸ್ಥಳೀಯ RT-PCR ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ, ಇದನ್ನು ಇತ್ತೀಚೆಗೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಅನುಮೋದಿಸಿದೆ.
* ಸೀಮೆನ್ಸ್ ಹೆಲ್ತಿನಿಯರ್ಸ್ ಅಭಿವೃದ್ಧಿಪಡಿಸಿದ IMDX ಮಂಕಿಪಾಕ್ಸ್ ಡಿಟೆಕ್ಷನ್ RT-PCR ಅಸ್ಸೇಯು CDSCO ನಿಂದ ಉತ್ಪಾದನಾ ಅನುಮೋದನೆಯನ್ನು ಪಡೆದುಕೊಂಡಿದೆ. ಇದು “ಮೇಕ್ ಇನ್ ಇಂಡಿಯಾ” ಉಪಕ್ರಮಕ್ಕೆ ಮಹತ್ವದ ಮೈಲಿಗಲ್ಲು ಎಂದೇ ವಿಶ್ಲೇಷಿಸಲಪಟ್ಟಿದೆ.
* “IMDX ಮಂಕಿಪಾಕ್ಸ್ ಪತ್ತೆ RT-PCR ಅನ್ನು ವಡೋದರಾದಲ್ಲಿರುವ ಮಾಲಿಕ್ಯೂಲರ್ ಡಯಾಗ್ನೋಸ್ಟಿಕ್ಸ್ ಸೌಲಭ್ಯದಲ್ಲಿ ತಯಾರಿಸಲಾಗುತ್ತಿದೆ, ಇದು ವರ್ಷಕ್ಕೆ ಒಂದು ಮಿಲಿಯನ್ ಪ್ರತಿಕ್ರಿಯೆಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಾರ್ಖಾನೆಯು ಕಿಟ್‌ಗಳನ್ನು ಲಭ್ಯವಾಗುವಂತೆ ಮಾಡಲು ಸಿದ್ಧವಾಗಿದೆ” ಎಂದು ಸೀಮೆನ್ಸ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್ ತಿಳಿಸಿದೆ.
ಶುಕ್ರವಾರ, 30 ಆಗಸ್ಟ್ 2024
12:01 ಅಪರಾಹ್ನ
Daily PDF
ಮಂಕಿ ಫಾಕ್ಸ್ಗಾಗಿ ಸ್ವದೇಶಿ RT-PCR ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿಪಡಿಸಿದ ಭಾರತ
Authored by:
Bhagya R K