* ನಿಕಾರಗುವಾದ ಮೂಲದ ಶೆಯ್‌ನ್ನಿಸ್ ಪಲಾಸಿಯೋಸ್ ಅವರು 2023ನೇ ಸಾಲಿನ 72ನೇ ಆವೃತ್ತಿಯ ಭುವನ ಸುಂದರಿ ಸ್ಪರ್ಧೆಯಲ್ಲಿ (Miss Universe 2023) ಸುಂದರಿಯಾಗಿ ಹೊರಹೊಮ್ಮಿದ್ದಾರೆ.
* ಸೆಂಟ್ರಲ್ ಅಮೆರಿಕದ ಅಲ್ ಸಾಲ್ವಡಾರ್‌ನಲ್ಲಿರುವ ಜೋಸ್ ಅಡೊಲ್ಫೊ ಪಿನಡೇ ಅರೇನಾದಲ್ಲಿ ನವೆಂಬರ್ 19 ರಂದು ನಡೆದ 72ನೇ ಭುವನ ಸುಂದರಿ ಸ್ಪರ್ಧೆಯಲ್ಲಿ 23 ವರ್ಷದ ಶೆಯ್‌ನ್ನಿಸ್ ಪಲಾಸಿಯೋಸ್ ಅವರು ಸೆಂಟ್ರಲ್ ಅಮೆರಿಕನ್ ದೇಶಕ್ಕಾಗಿ ಮೊದಲ ಬಾರಿಗೆ ವಿಶ್ವ ಸುಂದರಿ ಪ್ರಶಸ್ತಿಯನ್ನು ಪಡೆದುಕೊಂಡರು.
* ಥಾಯ್ಲೆಂಡ್‌ನ ಆಂಟೋನಿಯಾ ಪೋರ್ಸಿಲ್ಡ್ ರನ್ನರ್ ಅಪ್ ಎಂದು ಘೋಷಿಸಲಾಯಿತು. ಆಸ್ಟ್ರೇಲಿಯಾದ ಮೊರಾಯಾ ವಿಲ್ಸನ್ ಎರಡನೇ ರನ್ನರ್ ಅಪ್ ಸ್ಥಾನ ಪಡೆದರು.
* ಮಿಸ್ ಯೂನಿವರ್ಸ್ 2022ರ ಭುವನ ಸುಂದರಿಯಾಗಿದ್ದ ಅಮೆರಿಕದ ಆರ್'ಬೋನಿ ಗೇಬ್ರಿಯಲ್ ಅವರು ವೇದಿಕೆಯಲ್ಲಿ ಶೆನ್ನಿಸ್ ಪಲಾಸಿಯೊಸ್ ಅವರಿಗೆ ಈ ಬಾರಿಯ ಮಿಸ್ ಯೂನಿವರ್ಸ್ ಕಿರೀಟವನ್ನು ತೊಡಿಸಿದರು.
* ಮಿಸ್ ದಿವಾ ಯೂನಿವರ್ಸ್ 2023 ಕಿರೀಟವನ್ನು ಅಲಂಕರಿಸಿದ ಶ್ವೇತಾ ಮಿಸ್ ಬಾಡಿ ಬ್ಯೂಟಿಫುಲ್ ಮತ್ತು ಮಿಸ್ ಟ್ಯಾಲೆಂಟೆಡ್ ಪ್ರಶಸ್ತಿಗಳನ್ನು ಗೆದ್ದರು.
* 2023 ನೇ ವರ್ಷದಲ್ಲಿ ನಡೆದ 72ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 84 ದೇಶಗಳು ಮತ್ತು ಪ್ರಾಂತ್ಯಗಳ ಸ್ಪರ್ಧಿಗಳು ಪರಸ್ಪರ ಸ್ಪರ್ಧಿಸಿದ್ದರು.
ರವಿವಾರ, 19 ನವೆಂಬರ್ 2023
11:05 ಅಪರಾಹ್ನ
Daily PDF
Miss Universe 2023: ಮಿಸ್ ನಿಕಾರಗುವಾ ಮೂಲದ ಶೆಯ್‌ನ್ನಿಸ್ ಪಲಾಸಿಯೋಸ್ಗೆ ಭುವನ ಸುಂದರಿ ಕಿರೀಟ
Authored by:
Yallamma G