➤ ವಿಶ್ವಬ್ಯಾಂಕ್ ಗ್ರೂಪ್ ಅಧ್ಯಕ್ಷರಾದ ಅಜಯ್ ಬಂಗಾ (Ajay Banga) ಅವರು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮೈಕೆಲ್ ಕ್ರೇಮರ್ (Michael Kremer) ಅವರನ್ನು ವಿಶ್ವಬ್ಯಾಂಕ್ ಗ್ರೂಪ್‌ನ ಮುಖ್ಯ ಅರ್ಥಶಾಸ್ತ್ರಜ್ಞ (Chief Economist) ಮತ್ತು ಅಭಿವೃದ್ಧಿ ಅರ್ಥಶಾಸ್ತ್ರದ ಹಿರಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.
➤ ಮೈಕೆಲ್ ಕ್ರೇಮರ್ ಅವರು ವಿಶ್ವಪ್ರಸಿದ್ಧ ಅಭಿವೃದ್ಧಿ ಅರ್ಥಶಾಸ್ತ್ರಜ್ಞರಾಗಿದ್ದಾರೆ (Development Economist). ಪ್ರಸ್ತುತ ಅವರು ಚಿಕಾಗೋ ವಿಶ್ವವಿದ್ಯಾಲಯದ 'ಡೆವಲಪ್‌ಮೆಂಟ್ ಇನ್ನೋವೇಶನ್ ಲ್ಯಾಬ್' (Development Innovation Lab) ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ (PhD) ಪದವಿ ಪಡೆದಿದ್ದಾರೆ.
➤ 2019ರ ನೊಬೆಲ್ ಪ್ರಶಸ್ತಿ ಗೌರವ: ಮೈಕೆಲ್ ಕ್ರೇಮರ್ ಅವರಿಗೆ 2019ರಲ್ಲಿ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಲಭಿಸಿತ್ತು.
ಸಹ-ವಿಜೇತರು: ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ (Abhijit Banerjee) ಮತ್ತು ಎಸ್ತರ್ ಡುಫ್ಲೋ (Esther Duflo).
ಪ್ರಶಸ್ತಿಯ ಉದ್ದೇಶ: ಜಾಗತಿಕ ಬಡತನವನ್ನು ನಿವಾರಿಸಲು ನಡೆಸಿದ ಪ್ರಾಯೋಗಿಕ ವಿಧಾನಕ್ಕಾಗಿ (Randomized Controlled Trials - RCTs).
➤ ಜಾಗತಿಕ ಅಭಿವೃದ್ಧಿಗೆ ಕ್ರೇಮರ್ ಅವರ ಪ್ರಮುಖ ಕೊಡುಗೆಗಳು: ಮೈಕೆಲ್ ಕ್ರೇಮರ್ ಅವರ ಸಂಶೋಧನೆಗಳು ವಿಶ್ವದಾದ್ಯಂತ ಲಕ್ಷಾಂತರ ಜನರ ಜೀವನ ಮಟ್ಟ ಸುಧಾರಿಸಲು ನೆರವಾಗಿವೆ:
- ಲಸಿಕೆಗಳ ಕೊಡುಗೆ (Advance Market Commitments - AMCs): ರೇಚೆಲ್ ಗ್ಲೆನ್ನರ್‌ಸ್ಟರ್ ಅವರೊಂದಿಗೆ ಸೇರಿ 'ಅಡ್ವಾನ್ಸ್ ಮಾರ್ಕೆಟ್ ಕಮಿಟ್‌ಮೆಂಟ್ಸ್' ಮಾದರಿಯನ್ನು ರೂಪಿಸಿದರು. ಇದರ ಮೂಲಕ $1.5 ಬಿಲಿಯನ್ ವೆಚ್ಚದಲ್ಲಿ 'ನ್ಯುಮೋಕೊಕಲ್ ಲಸಿಕೆ'ಯನ್ನು 60ಕ್ಕೂ ಹೆಚ್ಚು ಅಭಿವೃದ್ಧಿಶೀಲ ರಾಷ್ಟ್ರಗಳ ಮಕ್ಕಳಿಗೆ ತಲುಪಿಸಲಾಯಿತು.
- ಆರೋಗ್ಯ ಯೋಜನೆ (Deworming Program): ಕರಳು ಹುಳು ನಿವಾರಣೆ (Deworming) ಕುರಿತ ಇವರ ಸಂಶೋಧನೆಯಿಂದಾಗಿ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ 2014ರಿಂದೀಚೆಗೆ 200 ಕೋಟಿಗೂ ಹೆಚ್ಚು ಮಕ್ಕಳಿಗೆ ಔಷಧೀಯ ಉಪಚಾರ ಸಿಕ್ಕಿದೆ.
- ಡಿಜಿಟಲ್ ಕೃಷಿ & AI: ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಹಾಗೂ AI ಆಧಾರಿತ ಹವಾಮಾನ ಮುನ್ಸೂಚನೆ ಮಾದರಿಗಳನ್ನು ಅಭಿವೃದ್ಧಿಪಡಿಸಿ, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ 5 ಕೋಟಿಗೂ ಹೆಚ್ಚು ರೈತರಿಗೆ ನೆರವಾಗಿದ್ದಾರೆ.
- Precision Development & DIV: ರೈತರ ಆದಾಯ ಹೆಚ್ಚಿಸಲು 'ಪ್ರೆಸಿಷನ್ ಡೆವಲಪ್‌ಮೆಂಟ್' ಸಂಸ್ಥೆಯನ್ನು ಮತ್ತು 300ಕ್ಕೂ ಹೆಚ್ಚು ನಾವೀನ್ಯತೆಗಳಿಗೆ ನೆರವಾದ USAID ಸಂಸ್ಥೆಯ 'ಡೆವಲಪ್‌ಮೆಂಟ್ ಇನ್ನೋವೇಶನ್ ವೆಂಚರ್ಸ್' ಅನ್ನು ಸಹ-ಸ್ಥಾಪಿಸಿದ್ದಾರೆ.
➤ ವಿಶ್ವಬ್ಯಾಂಕ್‌ನಲ್ಲಿ ಇವರ ಹೊಸ ಜವಾಬ್ದಾರಿ: ವಿಶ್ವಬ್ಯಾಂಕ್ ಗ್ರೂಪ್‌ಗೆ ಕ್ರೇಮರ್ ಅವರ ಆಗಮನವು ಈ ಕೆಳಗಿನ ಪ್ರಮುಖ ಸವಾಲುಗಳನ್ನು ಎದುರಿಸಲು ನೆರವಾಗಲಿದೆ:
- ಮುಂದಿನ ದಶಕದಲ್ಲಿ ದುಡಿಮೆಯ ವಯಸ್ಸಿಗೆ ಪಾದಾರ್ಪಣೆ ಮಾಡುತ್ತಿರುವ 1.2 ಬಿಲಿಯನ್ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವುದು.
- ಶಿಕ್ಷಣ, ಸಾರ್ವಜನಿಕ ಆರೋಗ್ಯ ಮತ್ತು ಕುಡಿಯುವ ನೀರಿನ ಪೂರೈಕೆ ಸುಧಾರಣೆ.
- ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಖಾಸಗಿ ಬಂಡವಾಳವನ್ನು (Private Capital) ಆಕರ್ಷಿಸುವುದು.
- ಹೊಸ ತಂತ್ರಜ್ಞಾನಗಳು ಹಾಗೂ ಸಂಶೋಧನಾ ದತ್ತಾಂಶಗಳನ್ನು (Data) ಬಳಸಿಕೊಂಡು ಬಡತನ ನಿವಾರಣೆಗೆ ಚುರುಕು ನೀಡುವುದು.
ಗುರುವಾರ, 17 ಸೆಪ್ಟೆಂಬರ್ 2026
3:16 ಅಪರಾಹ್ನ
Daily PDF
ಮೈಕೆಲ್ ಕ್ರೇಮರ್ ವಿಶ್ವಬ್ಯಾಂಕ್ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ನೇಮಕ
Authored by:
Basavaraj Halli