* ಪಾಶ್ಚಿಮಾತ್ಯ ವಲಯದಲ್ಲಿ ಮುಂಚೂಣಿಯ ಯುದ್ಧ ಘಟಕದ ಕಮಾಂಡ್ ತೆಗೆದುಕೊಳ್ಳಲು ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರನ್ನು ಆಯ್ಕೆ ಮಾಡಿದೆ ಎಂದು ಭಾರತೀಯ ವಾಯುಪಡೆ ಮಾರ್ಚ್ 7 ದಿನದಂದು ಪ್ರಕಟಿಸಿದೆ. ಹೆಲಿಕಾಪ್ಟರ್ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶಲೀಝಾ ಧಮಿ ಅವರು ಪಶ್ಚಿಮ ವಲಯದ ಮಿಸೈಲ್ ಸ್ಕ್ವಾಡ್ರನ್ನ ನೇತೃತ್ವ ವಹಿಸಿಕೊಳ್ಳಲಿದ್ದಾರೆ.
* ಗ್ರೂಪ್ ಕ್ಯಾಪ್ಟನ್ ಧಾಮಿ ಅವರು ಪಾಕಿಸ್ತಾನವನ್ನು ಎದುರಿಸುತ್ತಿರುವ ಪಾಶ್ಚಿಮಾತ್ಯ ಸೆಕ್ಟರ್ನಲ್ಲಿ ಕ್ಷಿಪಣಿ ಸ್ಕ್ವಾಡ್ರನ್ಗೆ ಕಮಾಂಡ್ ಆಗಿರುವ ಐಎಎಫ್ನಲ್ಲಿ ಮೊದಲ ಮಹಿಳಾ ಅಧಿಕಾರಿಯಾಗಲಿದ್ದಾರೆ.
* ಪಂಜಾಬ್ನ ಲುಧಿಯಾನಾದಲ್ಲಿ ಜನಿಸಿದ ಶಲೀಝಾ ಧಮಿ 2003ರಲ್ಲಿ ಮೊದಲ ಬಾರಿಗೆ ಏಕಾಂಗಿಯಾಗಿ ಎಚ್ಎಎಲ್ ನಿರ್ಮಿತ ಎಚ್ಪಿಟಿ-32 ದೀಪಕ್ ವಿಮಾನವನ್ನು ಯಶಸ್ವಿಯಾಗಿ ಹಾರಾಟ ನಡೆಸಿದರು.
* ಬಳಿಕ ವಾಯುಪಡೆಯ ಫ್ಲೈಯಿಂಗ್ ಆಫೀಸರ್ ಆಗಿ ನೇಮಕಗೊಂಡರು. 2005ರಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಭಡ್ತಿ ಪಡೆದು, 2009ರಲ್ಲಿ ಸ್ಕ್ವಾಡ್ರನ್ ಲೀಡರ್ ಆದರು.
* 2019ರಲ್ಲಿ ಫ್ಲೈಯಿಂಗ್ ಘಟಕವೊಂದರ ಫ್ಲೈಟ್ ಕಮಾಂಡರ್ ಹುದ್ದೆಗೆ ಭಡ್ತಿ ಪಡೆದ ಮೊದಲ ಮಹಿಳಾ ಐಎಎಫ್ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಒಟ್ಟಾರೆ ತಮ್ಮ 15 ವರ್ಷಗಳ ಅನುಭವದಲ್ಲಿ ಹಲವು ಪ್ರಥಮಗಳ ಗರಿಗಳು ಧಮಿ ಅವರ ಮುಡಿಗೇರಿವೆ.
ಮಹಿಳಾ ಅಧಿಕಾರಿಗೆ ಸಮರದಳದ ಹೊಣೆ : ಐಎಎಫ್ ಗ್ರೂಪ್ ಕ್ಯಾಪ್ಟನ್ ಶಲೀಝಾ ಧಮಿ ಸಾಧನೆ
Published by Yallamma G
08 ಮಾರ್ಚ್ 2023