* ಮಹಾರಾಷ್ಟ್ರ ಸರ್ಕಾರ ಖಾಸಗಿ ವಲಯದಲ್ಲಿ ಕೆಲಸದ ಸಮಯವನ್ನು ವಿಸ್ತರಿಸಲು ತೀರ್ಮಾನಿಸಿದೆ. ಸದ್ಯ ಇರುವ 9 ಗಂಟೆಯ ಕೆಲಸದ ಅವಧಿಯನ್ನು 10 ಗಂಟೆಗೆ ಹೆಚ್ಚಿಸಲು ಕಾರ್ಮಿಕ ಸಚಿವಾಲಯ ಕರಡು ತಿದ್ದುಪಡಿ ಸಿದ್ಧಪಡಿಸಿ ಕ್ಯಾಬಿನೆಟ್‌ಗೆ ಮಂಡಿಸಿದೆ.
* 2017ರ "ಶಾಪ್ಸ್ ಆ್ಯಂಡ್ ಎಸ್ಟಾಬ್ಲಿಶ್‌ಮೆಂಟ್" ಕಾಯ್ದೆಯಡಿ ನಿಗದಿಯಾಗಿದ್ದ ಕೆಲಸದ ಅವಧಿಯಲ್ಲಿ ಐದು ಪ್ರಮುಖ ಬದಲಾವಣೆ ತರಲು ಮುಂದಾಗಿದೆ. ದಿನಕ್ಕೆ ಗರಿಷ್ಠ 10 ಗಂಟೆ ಕೆಲಸ ಮಾತ್ರ ಮಾಡಿಸಬಹುದಾಗಿದೆ, ಅದಕ್ಕಿಂತ ಹೆಚ್ಚು ದುಡಿಸಿಕೊಳ್ಳುವಂತಿಲ್ಲ.
* ಸತತ ಕೆಲಸದ ಅವಧಿಯನ್ನು 5 ಗಂಟೆಯಿಂದ 6 ಗಂಟೆಗೆ ವಿಸ್ತರಿಸಲಾಗಿದ್ದು, ಬಳಿಕ ಕಡ್ಡಾಯವಾಗಿ 30 ನಿಮಿಷಗಳ ಬ್ರೇಕ್ ನೀಡಬೇಕು ಎಂದು ನಿಯಮ ಬದಲಾವಣೆಯ ಪ್ರಸ್ತಾಪವಿದೆ.
* ಓವರ್‌ಟೈಮ್ ನಿಯಮದಲ್ಲೂ ಬದಲಾವಣೆ ತರಲಾಗಿದ್ದು, ಮೂರು ತಿಂಗಳಲ್ಲಿ ಅನುಮತಿಸಲಾದ 125 ಗಂಟೆಯನ್ನು 144 ಗಂಟೆಗೂ ಹೆಚ್ಚಿಸಲಾಗುತ್ತಿದೆ. ಪ್ರತಿ ದಿನ ಕೆಲಸ ಹಾಗೂ ಓವರ್‌ಟೈಮ್ ಸೇರಿ ಗರಿಷ್ಠ 12 ಗಂಟೆ ಮಾತ್ರ ಅನುಮತಿಯಾಗಲಿದೆ.
ಮಹಾರಾಷ್ಟ್ರದಲ್ಲಿ ಖಾಸಗಿ ವಲಯದ ಕೆಲಸದ ಅವಧಿ 10 ಗಂಟೆಗೆ ವಿಸ್ತರಣೆ
Published by Jyoti Angadi
04 ಸೆಪ್ಟೆಂಬರ್ 2025