* ವಿಶ್ವ ರೆಡ್ ಕ್ರಾಸ್ ಆಂದೋಲನದ ವಿಶಿಷ್ಟ ಮತ್ತು ಏಕೀಕೃತ ಸ್ವರೂಪದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 8ರಂದು ವಿಶ್ವ ರೆಡ್ ಕ್ರಾಸ್ ದಿನವನ್ನು ಆಚರಿಸಲಾಗುತ್ತದೆ.
* 2025ರ ವಿಶ್ವ ರೆಡ್ ಕ್ರಾಸ್ ದಿನದ ಥೀಮ್ 'ಮಾನವೀಯತೆಯನ್ನು ಜೀವಂತವಾಗಿರಿಸುವುದು ಎಂಬುದು ಥೀಮ್ ಆಗಿದೆ.
* 1828ರ ಮೇ 8ರಂದು ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್‌ಕ್ರಾಸ್‌ನ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಜನಿಸಿದ್ದರು. ವಿಶ್ವ ರೆಡ್ ಕ್ರಾಸ್ ಸಂಸ್ಥೆಯನ್ನು 1863ರಲ್ಲಿ ಪ್ರಾರಂಭಿಸಿದ್ದರು. ಹೆನ್ರಿ ಡ್ಯೂನಾಂಟ್ ಜನ್ಮದಿನದಂದು ವಿಶ್ವ ರೆಡ್ ಕ್ರಾಸ್ ದಿನವನ್ನು ಆಚರಿಸಲಾಗುತ್ತಿದೆ.
* ವಿಶ್ವ ರೆಡ್ ಕ್ರಾಸ್ ಪರಿಕಲ್ಪನೆಯನ್ನು ಮೊದಲು 1933 ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆದ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸಮ್ಮೇಳನವು ಪ್ರಸ್ತಾಪಿಸಿತು. ಮೊದಲ ಮಹಾಯುದ್ಧದ ನಂತರ ಜಗತ್ತಿಗೆ ಶಾಂತಿ ಮತ್ತು ಸ್ಥಿರತೆಯ ಅಗತ್ಯವಿತ್ತು. ರೆಡ್ ಕ್ರಾಸ್ ಸಂಸ್ಥೆ ಹುಟ್ಟಿದ್ದು ಇಂತಹ ಪ್ರಯತ್ನಗಳಿಂದಲೇ.
* 1934 ರಲ್ಲಿ ಟೋಕಿಯೊದಲ್ಲಿ ನಡೆದ 15 ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ, ರೆಡ್ ಕ್ರಾಸ್ ಒಪ್ಪಂದ ವರದಿಯನ್ನು ಮಂಡಿಸಲಾಯಿತು, ಯುದ್ಧದ ಸಮಯದಲ್ಲಿ ಗಾಯಗೊಂಡ ಹೋರಾಟಗಾರರ ರಕ್ಷಣೆಗಾಗಿ ತತ್ವಗಳನ್ನು ರೂಪಿಸಲಾಯಿತು.
* ಈ ದಿನವು ಜನರಿಗೆ ಕರುಣೆ, ಪ್ರೀತಿ, ವಾತ್ಸಲ್ಯ, ಬೆಂಬಲದ ಮಹತ್ವವನ್ನು ನೆನಪಿಸುತ್ತದೆ. ಅಲ್ಲದೆ ಈ ದಿನ ರೆಡ್ ಕ್ರಾಸ್ ಸಂಸ್ಥೆಯ ತತ್ವಗಳು, ಧ್ಯೇಯಗಳು, ಮೌಲ್ಯಗಳು ಮತ್ತು ಚಟುವಟಿಕೆಗಳನ್ನು ಸಹ ಎತ್ತಿಹಿಡಿಯುತ್ತದೆ. ಈ ದಿನ ಜನರಿಗೆ ಮಾನವೀಯತೆಯ ಮೌಲ್ಯವನ್ನು ಕಲಿಸುತ್ತದೆ.
ಗುರುವಾರ, 08 ಮೇ 2025
11:02 ಪೂರ್ವಾಹ್ನ
Daily PDF
ಮೇ 8 : ವಿಶ್ವ ರೆಡ್ ಕ್ರಾಸ್ ದಿನ
Authored by:
Bhagya R K