* ಭಾರತವು ಈಗ ವಿಶ್ವದಲ್ಲಿ ಮೂರನೇ ಅತಿದೊಡ್ಡ ವಾಹನ ತಯಾರಕ ರಾಷ್ಟ್ರವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
* ನವದೆಹಲಿಯಲ್ಲಿ ಆಯೋಜಿಸಲಾದ ನಾಲ್ಕನೇ ಅಂತರರಾಷ್ಟ್ರೀಯ ಬಿಬಿಬಿ ಶೃಂಗಸಭೆ ಹಾಗೂ ಜೈವಿಕ ಇಂಧನ ಮೌಲ್ಯ ಸರಪಳಿ ಪ್ರದರ್ಶನದಲ್ಲಿ ಮಾತನಾಡುವ ವೇಳೆ ಅವರು ಈ ಮಾತುಗಳನ್ನು ಹೇಳಿದರು.
* ಭಾರತೀಯ ಆಟೋಮೊಬೈಲ್ ಕ್ಷೇತ್ರವು ನಿರಂತರವಾಗಿ ವೃದ್ಧಿಸುತ್ತಿದ್ದು, ವಿವಿಧ ಮಾದರಿಯ ವಾಹನಗಳಿಗೆ ಬೇಡಿಕೆಯಾಗುತ್ತಿರುವುದನ್ನು ಗಡ್ಕರಿ ಒತ್ತಿ ಹೇಳಿದ್ದಾರೆ.
* ಆಟೋಮೊಬೈಲ್ ಉತ್ಪಾದನೆ ಹೆಚ್ಚಾಗುತ್ತಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಇಂಧನದ ಉಪಯೋಗವೂ ಹೆಚ್ಚಾಗುತ್ತಿದೆ ಎಂಬುದನ್ನು ಅವರು ವಿವರಿಸಿದರು.
* ಆಮದು ಅವಲಂಬನೆ ಕಡಿಮೆಯಾಗಬೇಕು ಹಾಗೂ ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯವಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
* ಕೃಷಿ ಕಾರ್ಯ ಚಟುವಟಿಕೆಗಳು ಆರ್ಥಿಕವಾಗಿ ಲಾಭದಾಯಕವಾಗಿಲ್ಲವಾದ್ದರಿಂದ, ಅದನ್ನು ಸಮರ್ಥವಾಗುವಂತೆ ರೂಪಾಂತರಗೊಳಿಸುವ ಮಾರ್ಗವನ್ನು ಅನ್ವೇಷಿಸಬೇಕಿದೆ ಎಂದು ಗಡ್ಕರಿ ಹೇಳಿದರು.
* ದೇಶವು ಸಂಪೂರ್ಣವಾಗಿ ಸ್ವಾವಲಂಬಿಯಾಗಬೇಕಾದರೆ ಕೃಷಿಯಲ್ಲಿ ಆರ್ಥಿಕ ಬದಲಾವಣೆ ಅನಿವಾರ್ಯ ಎಂದು ಅವರು ತಿಳಿಸಿದರು.
ಗುರುವಾರ, 08 ಮೇ 2025
11:41 ಪೂರ್ವಾಹ್ನ
Daily PDF
ಭಾರತಕ್ಕೆ ವಾಹನ ತಯಾರಿಕೆಯಲ್ಲಿ ವಿಶ್ವದ ಮೂರನೇ ಸ್ಥಾನ : ನಿತಿನ್ ಗಡ್ಕರಿ
Authored by:
Jyoti Angadi