* ಪ್ರತಿ ವರ್ಷ ಭಾರತದಾದ್ಯಂತ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಲಾಗುತ್ತದೆ, ಇದು ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸೊಳ್ಳೆಯಿಂದ ಹರಡುವ ಈ ವೈರಲ್ ರೋಗದ ವಿರುದ್ಧ ತಡೆಗಟ್ಟುವ ಕ್ರಮಗಳನ್ನು ಉತ್ತೇಜಿಸಲು ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
* 2025ರ ರಾಷ್ಟ್ರೀಯ ಡೆಂಗ್ಯೂ ದಿನದ ಥೀಮ್ ' ಮುಂಜಾಗ್ರತೆ ವಹಿಸಿ,ಡೆಂಗ್ಯೂ ತಡೆಗಟ್ಟಿ : ಆರೋಗ್ಯಕರ ಜೀವನಕ್ಕಾಗಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ' ಎಂಬುವುದಾಗಿದೆ.
* ಹೆಚ್ಚುತ್ತಿರುವ ಡೆಂಗ್ಯೂ ಜ್ವರ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪರಿಣಾಮಕಾರಿ ತಡೆಗಟ್ಟುವ ತಂತ್ರಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಪ್ರಾರಂಭಿಸಿತು.
* 2025 ರ ರಾಷ್ಟ್ರೀಯ ಡೆಂಗ್ಯೂ ದಿನದ ಮಹತ್ವ :
- ಡೆಂಗ್ಯೂ ತಡೆಗಟ್ಟುವ ಕಾರ್ಯಕ್ರಮಗಳಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು.
- ಚಿಕಿತ್ಸೆ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಹರಡುವುದು.
- ಸರ್ಕಾರದ ಉಪಕ್ರಮಗಳು ಮತ್ತು ಆರೋಗ್ಯ ಸೇವೆಯ ಲಭ್ಯತೆಯನ್ನು ಎತ್ತಿ ತೋರಿಸುವುದು.
- ಡೆಂಗ್ಯೂ ಋತುವಿಗೆ ಮುನ್ನ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳನ್ನು ಸಜ್ಜುಗೊಳಿಸುವುದು.
* ಕರ್ನಾಟಕ ಸ್ಥಳೀಯ ಸಂಸ್ಥೆಗಳ ಪ್ರಯತ್ನಗಳ ಹೊರತಾಗಿಯೂ, ಕರ್ನಾಟಕವು 2025 ರಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಇತ್ತೀಚಿನ ಏರಿಕೆಯನ್ನು ಕಂಡಿದೆ.
- ವಾರ 9 (ಫೆಬ್ರವರಿ 24 - ಮಾರ್ಚ್ 2, 2025) :
- 80 ಹೊಸ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.
- 8 ನೇ ವಾರಕ್ಕೆ ಹೋಲಿಸಿದರೆ 16% ಹೆಚ್ಚಳವನ್ನು ಪ್ರತಿನಿಧಿಸುತ್ತದೆ .
- ರಾಜ್ಯಾದ್ಯಂತ 707 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.
- 2024 ರಲ್ಲಿ ಒಟ್ಟು ಪ್ರಕರಣಗಳು : 32,789 ಪ್ರಕರಣಗಳು.
ಶುಕ್ರವಾರ, 16 ಮೇ 2025
10:35 ಪೂರ್ವಾಹ್ನ
Daily PDF
ಮೇ 16 2025 : ರಾಷ್ಟ್ರೀಯ ಡೆಂಗ್ಯೂ ದಿನ
Authored by:
Yallamma G