* ಪ್ರತಿವರ್ಷ ಮೇ 1 ರಂದು ಶ್ರಮಿಕ ವರ್ಗದ ಮಹತ್ವ ಹಾಗೂ ಅವರ ಅಗತ್ಯವನ್ನು ತಿಳಿಸುವ ಹಾಗೂ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ.
* ಅಂತರರಾಷ್ಟ್ರೀಯ ಕಾರ್ಮಿಕ ದಿನದ 2025 ರ ಥೀಮ್ "ಕಾರ್ಮಿಕರ ಸುರಕ್ಷತೆ ಮತ್ತು ಅರೋಗ್ಯ" ಎಂಬುದು ಥೀಮ್ ಆಗಿದೆ.
* 1889ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಸಮಾಜವಾದಿ ಅಂತಾರಾಷ್ಟ್ರೀಯ ಪ್ರಥಮ ಅಧಿವೇಶನದಲ್ಲಿ ಮೇ 1ರಂದು 'ಅಂತಾರಾಷ್ಟ್ರೀಯ ಕಾರ್ಮಿಕ ದಿನ'ವಾಗಿ ಆಚರಿಸಲು ನಿರ್ಧರಿಸಲಾಯಿತು.
* ಚೀನಾ, ಕ್ಯೂಬಾ ಮತ್ತು ಮೊದಲಿನ ಸೋವಿಯತ್ ರಷ್ಯಾದಲ್ಲಿ ಮೇ 1ರಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ. ಆದರೆ ಅಮೆರಿಕದಲ್ಲಿ ಸೆಪ್ಟೆಂಬರ್‌ನಲ್ಲಿ ಕಾರ್ಮಿಕರ ದಿನವನ್ನು ಆಚರಿಸುತ್ತದೆ.
* ಕಾರ್ಮಿಕ ದಿನಾಚರಣೆಯ ಪ್ರಾಥಮಿಕ ಉದ್ದೇಶವು ಕಾರ್ಮಿಕ ವರ್ಗದ ಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸುವುದು, ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಶೋಷಣೆಯಿಂದ ಅವರನ್ನು ರಕ್ಷಿಸುವುದು.
* ಕಾರ್ಮಿಕ ದಿನದ ಮೂಲವು ಯುನೈಟೆಡ್ ಸ್ಟೇಟ್ಸ್‌ನಲ್ಲಿ 19 ನೇ ಶತಮಾನಕ್ಕೆ ಹಿಂದಿನದು, ಅಲ್ಲಿ ಎಂಟು-ಗಂಟೆಗಳ ದಿನದ ಚಳುವಳಿ ಎಂಟು ಗಂಟೆಗಳ ಕೆಲಸದ ದಿನ, ಎಂಟು ಗಂಟೆಗಳ ಮನರಂಜನೆ ಮತ್ತು ಎಂಟು ಗಂಟೆಗಳ ವಿಶ್ರಾಂತಿಗಾಗಿ ಪ್ರತಿಪಾದಿಸಲು ಪ್ರಾರಂಭಿಸಲಾಯಿತು.
* ಭಾರತದಲ್ಲಿ ಮೊದಲ ಕಾರ್ಮಿಕ ದಿನವನ್ನು ಮೇ 1, 1923 ರಂದು ಮದ್ರಾಸಿನಲ್ಲಿ ಆಚರಿಸಲಾಯಿತು. ಇದನ್ನು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ಪ್ರಾರಂಭಿಸಿತು.
* ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಉದಾಹರಣೆಗೆ ಹಿಂದಿಯಲ್ಲಿ 'ಅಂತಾರಾಷ್ಟ್ರೀಯ ಶ್ರಮಿಕ್ ದಿವಸ್', ಕಾರ್ಮಿಕ ದಿನಚರಣೆ (ಕನ್ನಡ), ಕಾರ್ಮಿಕ ದಿನೋತ್ಸವಮ್ (ತೆಲುಗು), ಕಮ್‌ಗರ್ ದಿವಸ್ (ಮರಾಠಿ), ಉಜೈಪಾಲರ್ ದೀನಂ (ತಮಿಳು), ತೊಝಿಲಾಲಿ ದಿನಂ (ಮಲಯಾಳಂ), ಮತ್ತು ಶ್ರೋಮಿಕ್ ದಿಬೋಶ್ (ಬಂಗಾಳಿ) ಎಂದು ಕರೆಯುತ್ತಾರೆ.
ಗುರುವಾರ, 01 ಮೇ 2025
10:58 ಪೂರ್ವಾಹ್ನ
Daily PDF
ಮೇ 1: ಅಂತರರಾಷ್ಟ್ರೀಯ ಕಾರ್ಮಿಕ ದಿನ
Authored by:
Bhagya R K