* ಭಾರತದ ತೆಲಂಗಾಣ ರಾಜ್ಯದ ಮೋಹನ್ ಸಾಯಿ ಅಕುಲ ಅವರು, ಜಗತ್ತಿನ ಅತ್ಯಾಧುನಿಕ ಖಾಸಗಿ ಗಗನಯಾನ ತರಬೇತಿ ಕಾರ್ಯಕ್ರಮಗಳಲ್ಲಿ ಒಂದಾದ ಸ್ಟಾರ್ ನ ಪ್ರತಿನಿಧಿಯಾಗಿ ಅನಲಾಗ್ ಮಿಷನ್‌ನಲ್ಲಿ ಭಾಗವಹಿಸಲಿದ್ದಾರೆ.
* ವರ್ಲ್ಡ್ ಬಿಗ್ಗೆಸ್ಟ್ ಅನಲಾಗ್ (WBA) ಒಕ್ಕೂಟವು ಅಕ್ಟೋಬರ್‌ನಲ್ಲಿ ಆಯೋಜಿಸಿರುವ ಎರಡು ವಾರಗಳ ಸುದೀರ್ಘ ಅನಲಾಗ್ ಯೋಜನೆಯ ಭಾಗವಾಗಿ, ಮೇ 5ರಿಂದ 9ರವರೆಗೆ ಅರಿನಾದಲ್ಲಿ ನಡೆಯುವ ಅಂತಿಮ ತರಬೇತಿಯಲ್ಲಿ ಅವರು 18 ಅಂತಾರಾಷ್ಟ್ರೀಯ ಗಗನಯಾನಿಗಳೊಂದಿಗೆ ಭಾಗಿಯಾಗಲಿದ್ದಾರೆ.
* 2023 ಮತ್ತು 2024ರಲ್ಲಿ ಎರಡು ಲೂನಾರ್ ಅನಲಾಗ್ ಮಿಷನ್‌ಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ, ಮೋಹನ್ ಅವರು ಮಂಗಳಯಾನ ಗಗನಯಾನಿಗಳ ತರಬೇತಿಗೆ ಉದ್ದೇಶಿತ WBA ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ನೂರಾರು ಅರ್ಜಿದಾರರ ಪೈಕಿ ಅವರು ಆಯ್ಕೆಯಾದರು.
* 2024ರ ಮಾರ್ಚ್‌ನಿಂದ ಆಗಸ್ಟ್ ವರೆಗೆ ನಡೆದ ಪರೀಕ್ಷೆ, ಸಂದರ್ಶನಗಳಲ್ಲಿ ತೇರ್ಗಡೆ ಹೊಂದಿದ ಅವರು 80 ಅಭ್ಯರ್ಥಿಗಳ ಪಟ್ಟಿಗೆ ಸೇರ್ಪಡೆಯಾದರು.
* ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆದ ಎರಡು ತಿಂಗಳ ತರಬೇತಿಯಲ್ಲಿ ಶೇ. 97 ಅಂಕಗಳೊಂದಿಗೆ ಅವರು ಅಂತಿಮ 18 ಅಭ್ಯರ್ಥಿಗಳ ಪಟ್ಟಿ ತಲುಪಿದ್ದಾರೆ.
* ಈ ತರಬೇತಿ ಸಂಪೂರ್ಣವಾಗಿ ಐಸೋಲೇಶನ್‌ನಲ್ಲಿ, ಯಾವುದೇ ಬಾಹ್ಯ ಸಂಪರ್ಕವಿಲ್ಲದೆ ನಡೆಯಲಿದೆ. ಈ ಮೂಲಕ ಅಂತಾರಿಕ್ಷ ಪ್ರಯಾಣದ ವೇಳೆ ಮನುಷ್ಯನ ದೈಹಿಕ ಹಾಗೂ ಮಾನಸಿಕ ಸ್ಥಿತಿಗಳ ಅಧ್ಯಯನ ನಡೆಸಲಾಗುತ್ತದೆ.
ಗುರುವಾರ, 01 ಮೇ 2025
12:27 ಅಪರಾಹ್ನ
Daily PDF
ಭಾರತದ ಮೋಹನ್ ತೆಲಂಗಾಣದಿಂದ ಸ್ಟಾರ್ ಮಿಶನ್ಗೆ ಆಯ್ಕೆ!
Authored by:
Jyoti Angadi