* ಮಧ್ಯಪ್ರದೇಶದ ಶಿವಪುರದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇರುವ ದಕ್ಷಿಣ ಆಫ್ರಿಕಾದ ಚೀತಾ 'ಗಾಮಿನಿ'ಯು ಇತ್ತೀಚಿಗೆ 5 ಮರಿಗಳಿಗೆ ಜನ್ಮ ನೀಡಿದೆ. ದಕ್ಷಿಣ ಆಫ್ರಿಕಾದ ಚೀತಾ ಮರಿಗಳನ್ನು ಹಾಕಿದ ಮೊದಲ ಪ್ರಕರಣ ವಾಗಿದೆ.
* ಭಾರತದಲ್ಲಿ ಚೀತಾ ಮರಿಗಳ ಸಂಖ್ಯೆಯು 13 ಕ್ಕೆ ಏರಿಕೆ ಆಗಿದ್ದು ಕುನೋಪಾರ್ಕ್ ನಲ್ಲಿಓಟ್ಟು ಚೀತಾಗಳ ಸಂಖ್ಯೆಯು ಇದೀಗ 26 ಕ್ಕೆ ತಲುಪಿದೆ ಎಂದು ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವ ಭೂಪೇಂದ್ರ ಯಾದವ ಅವರು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
* 2022 ಸಪ್ಟೆಂಬರ್ ನಲ್ಲಿ ನಮಿಬಿಯಾದಿಂದ ಫೆಬ್ರುವರಿ 8 ಹಾಗೂ 2023 ರಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಕುನೋ ಪಾರ್ಕಗೆ ಸ್ಥಳಾಂತರಿಸಲಾಗಿತ್ತು.
* ಜನವರಿ 2023 ದಿನಾಂಕ 16 ರಂದು ನಮೀಬಿಯಾದ ಶೌರ್ಯ ಎಂಬ ಚೀತಾ ಚಿಕಿತ್ಸೆ ಸಮಯದಲ್ಲಿ ಮೃತಪಟ್ಟಿತ್ತು, ಈ ನಷ್ಟದ ಪಾಲನೆಯಿಂದಾಗಿ ಕೆ ಎನ್ ಪಿ ಯಲ್ಲಿ ಚೀತಾ ಸಂತತಿಯು ಹೆಚ್ಚಿಗೆಯಾಗಿದೆ.
ಶುಕ್ರವಾರ, 05 ಎಪ್ರಿಲ್ 2024
4:45 ಅಪರಾಹ್ನ
Daily PDF
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ಚೀತಾ ಗಾಮಿನಿ
Authored by:
Akshata Halli