* ಮಧ್ಯಪ್ರದೇಶದ ರತಪಾನಿ ಅರಣ್ಯ ಪ್ರದೇಶವನ್ನು ಮಧ್ಯಪ್ರದೇಶ ರಾಜ್ಯದ 8ನೇ ಮತ್ತು ದೇಶದ 57ನೇ ರಾಷ್ಟ್ರೀಯ ಹುಲಿ ಸಂರಕ್ಷಣಾ ತಾಣವಾಗಿ ಘೋಷಿಸಲಾಗಿದೆ.
* ರೈಸನ್ ಮತ್ತು ರಾಜಧಾನಿ ಭೋಪಾಲ್ ಜಿಲ್ಲೆಗಳಿಗೆ ಹೊಂದಿಕೊಂಡಿರುವ ರತಪಾನಿ ಅರಣ್ಯವು ಮಧ್ಯಪ್ರದೇಶದ 8 ನೇ ಹುಲಿ ಸಂರಕ್ಷಿತ ಪ್ರದೇಶವಾಗಿದೆ, ಇದು 70 ಕ್ಕೂ ಹೆಚ್ಚು ಹುಲಿಗಳನ್ನು ಹೊಂದಿದೆ ಮತ್ತು ಪ್ರವಾಸೋದ್ಯಮ, ಸಂರಕ್ಷಣೆ ಮತ್ತು ಸ್ಥಳೀಯ ಉದ್ಯೋಗಾವಕಾಶಗಳನ್ನು ಉತ್ತೇಜಿಸುತ್ತದೆ.
* ರತಪಾನಿ ಹುಲಿ ಸಂರಕ್ಷಿತ ಪ್ರದೇಶದ ಗಡಿಯು ಭೋಪಾಲ್‌ನಿಂದ ಕೇವಲ 15 ಕಿಲೋ ಮೀಟರ್ ದೂರದಲ್ಲಿದೆ. ಭೋಪಾಲ್, ರೈಸೆನ್ ಮತ್ತು ಸೆಹೋರ್ 3 ಜಿಲ್ಲೆಗಳಿಗೆ ಚಾಚಿಕೊಂಡಿದೆ. ಈ ಅರಣ್ಯವು ಒಟ್ಟು 1271.456 ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿದೆ. ಅದರಲ್ಲಿ 763.812 ಕಿ.ಮೀ ಕೋರ್ ವಲಯ ಮತ್ತು 507.653 ಕಿ.ಮೀ ಬಫರ್ ವಲಯ ಎಂದು ಗುರುತಿಸಲಾಗಿದೆ. ಇದರ ವ್ಯಾಪ್ತಿಗೆ 9 ಗ್ರಾಮಗಳು ಬರುತ್ತವೆ.
* 2022ರ ಹುಲಿ ಗಣತಿಯ ಪ್ರಕಾರ, ರತಪಾನಿಯಲ್ಲಿ 56 ಹುಲಿಗಳಿವೆ ಎಂದು ಹೇಳಲಾಗಿದೆ. ಆದಾಗ್ಯೂ, ಪಗ್‌ಮಾರ್ಕ್‌ಗಳು ಮತ್ತು ಇತರ ಚಿಹ್ನೆಗಳ ಆಧಾರದ ಮೇಲೆ ಈ ಅರಣ್ಯದಲ್ಲಿ 70 ಕ್ಕೂ ಹೆಚ್ಚು ಹುಲಿಗಳಿವೆ ಎಂದು ಅಂದಾಜಿಸಲಾಗಿದೆ.
* ವಿಶ್ವ ಪರಂಪರೆಯ ತಾಣವಾದ ಭೀಮ್ ಬೆಟ್ಕಾ, ನರ್ಮದಾ ನದಿಯ ಆಮ್ಲಾ ಘಾಟ್ ಮತ್ತು ಸಲ್ಕಾನ್‌ಪುರ್ ದೇವಾಲಯವೂ ಈ ಪ್ರದೇಶದಲ್ಲಿವೆ.
* ಮಧ್ಯ ಪ್ರದೇಶದಲ್ಲಿ ಈಗಾಗಲೇ ಕನ್ಹಾ, ಸತ್ಪುರ್, ಬಂಢಾವಗಢ್, ಪೆಂಚ್, ಸಂಜಯ್ ದುಬ್ರಿ, ಪನ್ನಾ ಮತ್ತು ವೀರಂಗನ ದುರ್ಗಾವತಿ ಎಂಬ ಏಳು ಹುಲಿ ಸಂರಕ್ಷಿತ ತಾಣಗಳಿವೆ.
* 10 ಅಡಿ ಎತ್ತರದ ಬೇಲಿ ನಿರ್ಮಾಣ: ರಾಜಧಾನಿ ಭೋಪಾಲ್‌ಗೆ ರತಪಾನಿ ಅರಣ್ಯ ಪ್ರದೇಶವು ಸುಮಾರು 100 ಕಿಲೋ ಮೀಟರ್ ಗಡಿಯನ್ನು ಹಂಚಿಕೊಂಡಿದೆ. ರತಪಾನಿಯಿಂದ ಭೋಪಾಲ್‌ನ ಕಲಿಯಾಸೋಟ್ ಮತ್ತು ನೀಲ್ಬರ್ಹ್ ಪ್ರದೇಶಗಳಿಗೆ ಸಾಕಷ್ಟು ಹುಲಿಗಳ ಸಂಚಾರ ಕಂಡುಬಂದಿದೆ. ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಗಡಿಯಲ್ಲಿ 10 ಅಡಿ ಎತ್ತರದ ಬೇಲಿ ಅಳವಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
* ಎನ್‌ಟಿಸಿಎ ಮತ್ತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ 'ಟೈಗರ್ಸ್ ಸ್ಟೇಟಸ್: ಕೋ-ಪ್ರೆಡೇಟರ್ಸ್ & ಪ್ರೇ ಇನ್ ಇಂಡಿಯಾ-2022' ವರದಿಯ ಪ್ರಕಾರ, ಮಧ್ಯಪ್ರದೇಶದಲ್ಲಿ 785 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ದೇಶದಲ್ಲೇ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯವಾಗಿದೆ. ಬಳಿಕ ಕರ್ನಾಟಕದಲ್ಲಿ 563 ಮತ್ತು ಉತ್ತರಾಖಂಡದಲ್ಲಿ 560 ಹುಲಿಗಳಿವೆ ಎಂದು ವರದಿ ಹೇಳಿದೆ.
ಬುಧವಾರ, 04 ಡಿಸೆಂಬರ್ 2024
12:31 ಅಪರಾಹ್ನ
Daily PDF
ಮಧ್ಯ ಪ್ರದೇಶ: ರತಪಾನಿ ಅರಣ್ಯ ಪ್ರದೇಶ ದೇಶದ 57ನೇ ಹುಲಿ ಸಂರಕ್ಷಣಾ ವಲಯವಾಗಿ ಘೋಷಣೆ
Authored by:
Yallamma G