➤ ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಕ್ರೀಡಾಪಟುಗಳ ತಂಡವನ್ನು ಮುನ್ನಡೆಸಲು ಪ್ರಸಿದ್ಧ ಶೂಟರ್ ಮನು ಭಾಕರ್ (Manu Bhaker) ಮತ್ತು ಶಾಟ್‌ಪುಟ್ ಪಟು ತಜಿಂದರ್‌ಪಾಲ್ ಸಿಂಗ್ ತೂರ್ (Tajinderpal Singh Toor) ಅವರನ್ನು ಧ್ವಜಧಾರಿಗಳಾಗಿ (Flag-bearers) ಆಯ್ಕೆ ಮಾಡಲಾಗಿದೆ. ಭಾರತದ ಕ್ರೀಡಾ ಕ್ಷೇತ್ರದ ಹೆಮ್ಮೆಯಾಗಿರುವ ಈ ಇಬ್ಬರು ಅಥ್ಲೀಟ್‌ಗಳು ಉದ್ಘಾಟನಾ ಪಥಸಂಚಲನದಲ್ಲಿ (Opening Ceremony Parade of Nations) ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಮುನ್ನಡೆಯಲಿದ್ದಾರೆ.
➤ ಧ್ವಜಧಾರಿಗಳ ಪ್ರಮುಖ ಸಾಧನೆಗಳು
1. ಮನು ಭಾಕರ್ (Manu Bhaker) – ಶೂಟಿಂಗ್
- ಇತಿಹಾಸ ಪ್ರಸಿದ್ಧ ಸಾಧನೆ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟು ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
- ಕ್ರೀಡಾ ವಿಭಾಗ: 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್.
2. ತಜಿಂದರ್‌ಪಾಲ್ ಸಿಂಗ್ ತೂರ್ (Tajinderpal Singh Toor) – ಶಾಟ್‌ಪುಟ್
- ಏಷ್ಯನ್ ಗೇಮ್ಸ್ ಸತತ ಗೆಲುವು: ಕಳೆದ ಎರಡು ಏಷ್ಯನ್ ಗೇಮ್ಸ್ (2018 ಮತ್ತು 2022/23) ಆವೃತ್ತಿಗಳಲ್ಲಿ ಸತತವಾಗಿ ಚಿನ್ನದ ಪದಕ ಗೆದ್ದು ಪ್ರಶಸ್ತಿ ಕಾಯ್ದುಕೊಂಡಿದ್ದಾರೆ.
- ಕ್ರೀಡಾ ವಿಭಾಗ: ಅಥ್ಲೆಟಿಕ್ಸ್ - ಶಾಟ್‌ಪುಟ್ (Shot Put).
➤ ಕ್ರೀಡಾಕೂಟಕ್ಕೆ ಸಾಂಸ್ಕೃತಿಕ ಮಹತ್ವ: 2026ರ ಏಷ್ಯನ್ ಕ್ರೀಡಾಕೂಟದ ಪದಕಗಳು ವಿಶೇಷ ವಿಶೇಷ ವಿನ್ಯಾಸ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿವೆ. 'ಇಮ್ಯಾಜಿನ್ ಒನ್ ಏಷ್ಯಾ' ಎಂಬ ಘೋಷವಾಕ್ಯದ ಅಡಿ ವಿನ್ಯಾಸಗೊಳಿಸಲಾದ ಈ ಪದಕಗಳು, ಕ್ರೀಡೆಯ ಮೂಲಕ ಏಷ್ಯಾದ ವೈವಿಧ್ಯತೆ ಮತ್ತು ಏಕತೆಯನ್ನು ಬಿಂಬಿಸುತ್ತವೆ. ಚಿನ್ನದ ಪದಕ 265 ಗ್ರಾಂ ತೂಕವಿದ್ದು ಶುದ್ಧ ಬೆಳ್ಳಿ ಮತ್ತು ಕನಿಷ್ಠ 1 ಗ್ರಾಂ. ಚಿನ್ನದ ಲೇಪನವನ್ನು ಹೊಂದಿದೆ. ಬೆಳ್ಳಿಯ ಪದಕ 264 ಗ್ರಾಂ ತೂಕವಿದ್ದು ಸಂಪೂರ್ಣ ಬೆಳ್ಳಿಯಿಂದ ತಯಾರಾಗಿದೆ. ಕಂಚಿನ ಪದಕ 222 ಗ್ರಾಂ ತೂಕವಿದ್ದು ಶೇ.95ರಷ್ಟು ತಾಮ್ರ, ಶೇ.5ರಷ್ಟು ಜಿಂಕ್‌ನಿಂದ ರೂಪಿತವಾಗಿದೆ. ಪದಕದ ಪೆಟ್ಟಿಗೆಯು ಅಷ್ಟಭುಜಾಕೃತಿಯಲ್ಲಿದ್ದು, ಜಪಾನಿ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನ ಪಡೆದ ಹಿನೋಕಿ ಮರದಿಂದ ತಯಾರಿಸಲಾಗಿದೆ. 

ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ