* ಮೈಸೂರು ದಸರಾದ ಜಂಬೂ ಸವಾರಿಯ ಪ್ರಮುಖ ಘಟ್ಟವಾದ ಜಂಬೂಸವಾರಿ ಮೂರು ಗಂಟೆಗೂ ಹೆಚ್ಚು ಕಾಲ ಅಂಬಾರಿ ಬಗೆಬಗೆಯ ಕಲಾ ತಂಡಗಳು, ಕರ್ನಾಟಕದ ಜಿಲ್ಲೆಗಳ ಮಹತ್ವ ಸಾರುವ ಸ್ಥಬ್ಧಚಿತ್ರಗಳು, ತಾಯಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಿ ಬಂದ ಅಭಿಮನ್ಯುವಿನ ನೇತೃತ್ವದಲ್ಲಿ ನಡೆಯಿತು.
* ಮೈಸೂರಿನಲ್ಲಿ ನಡೆದಿರುವ ಜಂಬೂ ಸವಾರಿ ಮೆರವಣಿಗೆ ಕನ್ನಡದ ಭವ್ಯ ಸಂಸ್ಕೃತಿಯನ್ನು ಅನಾವರಣಗೊಳಿಸಿದರೆ ಮತ್ತೊಂದು ಕಡೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಕಾದಿದ್ದ ಸಹಸ್ರಾರು ಜನರಲ್ಲಿ ಸಂತೃಪ್ತಿಯ ಭಕ್ತಿಯ ಭಾವವೂ ಮೂಡಿತು. ಐದು ಲಕ್ಷಕ್ಕೂ ಅಧಿಕ ಜನ ಈ ಬಾರಿ ಜಂಬೂ ಸವಾರಿಯನ್ನು ನೇರವಾಗಿಯೇ ಕಣ್ತುಂಬಿಕೊಂಡರು.
* ಇನ್ನು ಇಡೀ ಮೆರವಣಿಗೆಯಲ್ಲಿ ಪೊಲೀಸ್ ಪಡೆಗಳೂ ಹೆಜ್ಜೆಹಾಕಿದವು. ಮೈಸೂರಿನ ನಗರ ಪೊಲೀಸ್, ಜಿಲ್ಲಾ ಪೊಲೀಸ್, ಮೀಸಲು ಪಡೆ, ಅಶ್ವರೋಹಿ ಪಡೆ, ಸಂಗೀತ ಪಡೆ, ಮಹಿಳಾ ಪಡೆ ಸೇರಿ ಹಲವು ಪಡೆಗಳು ಪರೇಡ್ ನಡೆಸುತ್ತಲೇ ಗಣರಾಜ್ಯೋತ್ಸವ ದಿನದ ಮೆರವಣಿಗೆ ನೆನಪು ಮಾಡಿದವು.
* ಜಿಲ್ಲೆಗಳ ಜತೆಯಲ್ಲಿ ಸರ್ಕಾರಿ ಇಲಾಖೆಗಳು, ನಿಗಮ, ಮಂಡಳಿಗಳನ್ನು ಒಳಗೊಂಡ 49 ಸ್ಥಬ್ಧಚಿತ್ರಗಳು ಗಮನ ಸೆಳೆದವು. ಬಹುತೇಕ ಸಂಸ್ಕೃತಿ ಮಹತ್ವ ತಿಳಿಸಿಕೊಡುವ, ಧರ್ಮಗುರುಗಳು, ದಾರ್ಶನಿಕರು, ಪ್ರವಾಸಿ ಸ್ಥಳ, ದೇಗುಲಗಳ, ಅರಣ್ಯ, ವನ್ಯಜೀವಿ ಸೇರಿ ವಿಭಿನ್ನ ವಿಷಯದ ಮಾಹಿತಿ ಪೂರ್ಣ ಸ್ಥಬ್ಧ ಚಿತ್ರಗಳೇ ಆಗಿದ್ದವು.
ಬುಧವಾರ, 25 ಅಕ್ಟೋಬರ್ 2023
9:44 ಅಪರಾಹ್ನ
Daily PDF
ಮೈಸೂರಿನಲ್ಲಿ ಅದ್ದೂರಿ ಜಂಬೂ ಸವಾರಿ
Authored by:
Akshata Halli