* ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ, ಅತಿ ವೇಗದ, ಮಾನವ ರಹಿತ ವೈಮಾನಿಕ ವಾಹನ (ಯುಎವಿ) ರಾಡಾರ್ ಸಂಪರ್ಕಕ್ಕೆ ಸಿಗದಂತೆ ಹಾರಾಟ ನಡೆಸುವ ಪ್ರಯೋಗವು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಾಯುನೆಲೆಯಲ್ಲಿ ಡಿಸೆಂಬರ್ 15 ರಂದು ಯಶಸ್ವಿಯಾಯಿತು.
* ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುತ್ತಿರುವ ದೇಶವು ವೈಮಾನಿಕ ಕ್ಷೇತ್ರದ ತಂತ್ರಜ್ಞಾನದ ಪರಿಪಕ್ವತೆಗೆ ಇದು ಸಾಕ್ಷಿಯಾಗಿದೆ ಎಂದು ರಕ್ಷಣಾ ಸಚಿವಾಲಯ ವ್ಯಕ್ತಪಡಿಸಿದೆ.
* ಡಿಅರ್‌ಡಿಒ ಅಂಗಸಂಸ್ಥೆಯಾದ ಬೆಂಗಳೂರಿನ ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಇ) ವಿನ್ಯಾಸಗೊಳಿಸಿದ ಯುಎವಿ 2022ರ ಜುಲೈ 1ರಂದು ಪ್ರಯೋಗಾರ್ಥ ಹಾರಾಟದಲ್ಲಿ ಯಶಸ್ಸು ಕಂಡಿತ್ತು.
* ದೇಶೀಯವಾಗಿ ಸಿದ್ಧಪಡಿಸಿದ ಎರಡು ಮೂಲ ಮಾದರಿಗಳನ್ನು ಬಳಸಿಕೊಂಡು ಸಂರಚನೆಯಲ್ಲಿ ಸುಧಾರಣೆ ಮಾಡಲಾಯಿತು. ಆರು ಪ್ರಯೋಗಾರ್ಥ ಹಾರಾಟ ನಡೆಸಿದ ಯುವಿವಿ ಏಳನೇ ಹಾರಾಟದಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ.
* ಈ ಹಿಂದಿನ ಡೋಣ್‌ಗಳು ಲಂಬಾಕಾರದ ರೆಕ್ಕೆಗಳನ್ನು ಹೊಂದಿರುತ್ತಿದ್ದವು. ಇದು ಬಾಲರಹಿತ ವ್ಯವಸ್ಥೆ ಹೊಂದಿದ್ದು, ಮೂಲ (ಮಾತೃ) ರಾಡಾರ್ ಹೊರತುಪಡಿಸಿ ಉಳಿದ ರಾಡಾರ್‌ಗಳ ಸಂಪರ್ಕಕ್ಕೆ ಸಿಗದೇ ರಹಸ್ಯವಾಗಿ ಕಾರ್ಯಾಚರಣೆ ನಡೆಸಲಿದೆ.
* 30,000 ಸಾವಿರ ಅಡಿಗಳ ಎತ್ತರದಲ್ಲಿ ಹಾರಾಡಬಲ್ಲ ತಪಸ್ 250 ಕಿ.ಮೀ.ಗೂ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ. ಗರಿಷ್ಠ 350 ಕೆಜಿ ಪೇಲೋಡ್ ಸಾಗಿಸುವ ಸಾಮರ್ಥ್ಯ ಹೊಂದಿರುವ ಯುಎವಿಯನ್ನು ಭಾರತೀಯ ಸೇನಾ ಪಡೆಗಳಿಗಾಗಿ ಬೇಹುಗಾರಿಕೆ, ಕಣ್ಗಾವಲು ಮತ್ತು ವೀಕ್ಷಣಾ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಡಿಆರ್‌ಡಿಓ ತಿಳಿಸಿದೆ.
ಶನಿವಾರ, 16 ಡಿಸೆಂಬರ್ 2023
4:25 ಅಪರಾಹ್ನ
Daily PDF
ಮಾನವ ರಹಿತ ವೈಮಾನಿಕ ವಾಹನ : ಯುಎವಿ ಪ್ರಯೋಗಾರ್ಥ ಹಾರಾಟ ಯಶಸ್ವಿ
Authored by:
Yallamma G