* ಲೋಕಸಭೆ ಚುನಾವಣೆ 2024ರ ಕರ್ನಾಟಕದಲ್ಲಿ 14 ಕ್ಷೇತ್ರಗಳ ಎರಡನೇ ಹಂತದ ಮತದಾನ ಮೇ 7 ರಂದು ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 9.45ರಷ್ಟು ಮತ ಚಲಾವಣೆಯಾಗಿದೆ.
* ಈಗಿನ ವರದಿ ಪ್ರಕಾರ ಶಿವಮೊಗ್ಗದಲ್ಲಿ ಅತಿ ಹೆಚ್ಚು ಎಂಬಂತೆ ಶೇ.11.39ರಷ್ಟು ಮತದಾನ ಆಗಿದ್ದರೆ, ರಾಯಚೂರಿನಲ್ಲಿ ಅತಿ ಕಡಿಮೆ ಎಂಬಂತೆ ಶೇ.8.27ರಷ್ಟು ಮತದಾನ ಆಗಿದೆ. ಅತಿ ಹೆಚ್ಚು ಮತದಾರರು ಇರುವ ಕಲಬುರಗಿಯಲ್ಲಿ ಶೇ.8.71ರಷ್ಟು ಮತದಾನ ನಡೆದಿದ್ದರೆ, ಅತಿ ಕಡಿಮೆ ಮತದಾರರಿರುವ ಉತ್ತರ ಕನ್ನಡದಲ್ಲಿ ಶೇ.11.08ರಷ್ಟಯ ಮತದಾನ ಸದ್ಯಕ್ಕೆ ಆಗಿದೆ.
* ಎರಡನೇ ಹಂತದ ಮತದಾನದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ 2.59 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. 28,269 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.
* 6,90,929 ಯುವ ಮತದಾರರಿದ್ದು, 2,29,263 ಮತದಾರರು 85 ವರ್ಷ ಮೇಲ್ಪಟ್ಟವರು ಮತ್ತು 3,43,966 ಮತದಾರರು ಅಂಗವಿಕಲರು (PwD) ಎಂದು ಪಟ್ಟಿ ಮಾಡಲಾಗಿದೆ.
* ಉತ್ತರ ಕರ್ನಾಟಕದಲ್ಲಿ ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಕಿತ್ತೂರು ಕರ್ನಾಟಕದ ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ. ಬೆಳಗಾವಿ, ಹಾವೇರಿ, ಧಾರವಾಡ, ಕರಾವಳಿ ಭಾಗದ ಉತ್ತರ ಕನ್ನಡ, ಮಧ್ಯ ಕರ್ನಾಟಕದ ದಾವಣಗೆರೆ, ಮಲೆನಾಡಿನ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಉಡುಪಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ ಬೈಂದೂರಿನಲ್ಲಿ ಈಗ ಮತದಾನ ನಡೆಯುತ್ತಿದೆ.
* ಮತದಾನದ ಸಮಯದಲ್ಲಿ ವೋಟರ್ ಸ್ಲಿಪ್ ಹಾಗೂ ಎಪಿಕ್ ಕಾರ್ಡ್ ತೋರಿಸಬೇಕು. ಅದಿಲ್ಲದಿದ್ದರೆ ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ, ರಾಜ್ಯ ಸರ್ಕಾರ, ಪಿಎಸ್ಕು, ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನೀಡಿರುವ ಅಂಗವೈಕಲ್ಯದ ಐಡಿ ಕಾರ್ಡ್‌ಗಳನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ.
ಮಂಗಳವಾರ, 07 ಮೇ 2024
11:58 ಪೂರ್ವಾಹ್ನ
Daily PDF
ಲೋಕಸಭಾ ಚುನಾವಣೆ 2024 : ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ
Authored by:
Bhagya R K