* ವರ್ಷಗಳ ಕಾಲ ಪ್ರವಾಸಿಗರ ಪ್ರಮುಖ ಆಕರ್ಷಣೆ ಆಗಿದ್ದ ಲಕ್ಷ್ಮಣ ಝೂಲಾ ಸೇತುವೆ ಪ್ರಾಯೋಜ್ಯ, ಜಂಗು ಹಾಗೂ ಸುರಕ್ಷತಾ ಕಾರಣಗಳಿಂದ ಹಾನಿಗೊಳಗಾಗಿತ್ತು. ಸಂಚಾರಕ್ಕೆ ಅನನೂಕುಲ ಹಾಗೂ ಅಪಾಯದ ಸಾಧ್ಯತೆ ಹೆಚ್ಚಾಗಿದ್ದ ಕಾರಣ ಹೊಸ ಪರ್ಯಾಯವಾಗಿ ಬಜರಂಗ ಸೇತು ನಿರ್ಮಿಸಲು ಸರ್ಕಾರ ಕ್ರಮ ಕೈಗೊಂಡಿತು.
*ಬಜರಂಗ ಸೇತು ಇದು ಪಾದಚಾರಿಗಳಿಗಾಗಿ ಮಾತ್ರ (Pedestrian Bridge) ನಿರ್ಮಿಸಲಾದ ಸೇತುವೆ ಆಗಿದೆ.
* ಗಂಗಾನದಿಯ ಮೇಲಿಂದ ನಡೆಯುವ ಅನುಭವವನ್ನು ಗಾಜಿನ ನೆಲದ ಮೂಲಕ ಸ್ಪಷ್ಟವಾಗಿ ನೋಡಬಹುದಾಗಿದೆ, ಇದು ವಿಶೇಷ ಆಕರ್ಷಣೆ.
* ಮಲ್ಟಿ-ಲೇಯರ್ ಟೆಂಪರ್ಡ್ ಗ್ಲಾಸ್ ಬಳಸಿ ನೆಲವನ್ನು ನಿರ್ಮಿಸಿರುವುದು ಪ್ರಮುಖ ತಾಂತ್ರಿಕ ವೈಶಿಷ್ಟ್ಯ ಇದು ಮೂರು ಪದರಗಳ ಗಟ್ಟಿ ಗಾಜು ಹೊಂದಿರುವುದರಿಂದ ಹೆಚ್ಚು ತೂಕ ಸಹಿಸುವ ಸಾಮರ್ಥ್ಯ ಹೊಂದಿದೆ.
* ಜೊತೆಗೆ ಪಾದಚಾರಿ ಸುರಕ್ಷತೆ,ಬಿರುಕು ತಡೆಗಟ್ಟುವ ಗುಣ ಸೇತುವೆಯ ಶಕ್ತಿ ಪರೀಕ್ಷೆಗಳನ್ನು ವಿಜ್ಞಾನಿಕವಾಗಿ ನಡೆಸಲಾಗಿದ್ದು, ನಿರಂತರ ನಿಗಾವಯವಸ್ಥೆ ಕೂಡ ಅಳವಡಿಸಲಾಗಿದೆ.
* ಸೇತುವೆಯ ಉದ್ದ ಸುಮಾರು 125 ಮೀಟರ್,ಎತ್ತರ 57 ಮೀಟರ್ ಗಂಗಾ ನದಿಯಿಂದ ಹಾಗೂ ಗಾಜಿನ ದಪ್ಪ40 ಮಿಮೀ (ಮೂರು ಪದರಗಳು) ಆಗಿದೆ.ಮತ್ತು ಸೇತುವೆಯ ಮೇಲೆ ಒಂದೇ ಸಮಯದಲ್ಲಿ 700 ಜನರು ಓಡಾಡುವ ಸಾಮರ್ಥ್ಯ ವನ್ನು ಹೊಂದಿದೆ.
* ಸೇತುವೆಯು ಸ್ಥಳೀಯ ವ್ಯಾಪಾರಿಗಳಿಗೆ ಹೋಟೆಲ್,ರೆಸ್ಟೋರೆಂಟ್,ಕೈಗಾರಿಕಾ ಕೈಪಾಡಿ ವಸ್ತುಗಳ ಮಾರಾಟ ಪ್ರವಾಸೋದ್ಯಮದ ಆದಾಯ ಗಣನೀಯವಾಗಿ ಏರಿಕೆ ಸ್ಥಳೀಯ ಉದ್ಯೋಗಾವಕಾಶಗಳಿಗೆ ಉತ್ತೇಜನ ನೀಡುವಮೂಲಕ ಆರ್ಥಿಕ ವೃದ್ಧಿಗೆ ಕಾರಣವಾಗಲಿದೆ.* ಸೇತುವೆಯ ಉದ್ದ ಸುಮಾರು 125 ಮೀಟರ್,ಎತ್ತರ 57 ಮೀಟರ್ ಗಂಗಾ ನದಿಯಿಂದ ಹಾಗೂ ಗಾಜಿನ ದಪ್ಪ40 ಮಿಮೀ (ಮೂರು ಪದರಗಳು) ಆಗಿದೆ.ಮತ್ತು ಸೇತುವೆಯ ಮೇಲೆ ಒಂದೇ ಸಮಯದಲ್ಲಿ 700 ಜನರು ಓಡಾಡುವ ಸಾಮರ್ಥ್ಯ ವನ್ನು ಹೊಂದಿದೆ.
* ಬಜರಂಗ ಸೇತು ಆಧುನಿಕ ತಂತ್ರಜ್ಞಾನ, ಪ್ರವಾಸೋದ್ಯಮದ ಉತ್ತೇಜನ ಮತ್ತು ಧಾರ್ಮಿಕ–ಸಾಹಸ ಅನುಭವಕ್ಕೆ ಹೊಸ ವೇದಿಕೆ ಆಗಿದೆ.