* ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ವಿರುದ್ಧ ಹೇರಲಾಗಿದ್ದ ಹೆಚ್ಚಿನ ಮಟ್ಟದ ವ್ಯಾಪಾರ ಸುಂಕ (Tariff) ಗಳನ್ನು 57%ರಿಂದ 47%ಕ್ಕೆ ಇಳಿಸುವ ಮಹತ್ವದ ನಿರ್ಧಾರವನ್ನು ಘೋಷಿಸಿದ್ದಾರೆ. ಇದನ್ನು ಎರಡು ರಾಷ್ಟ್ರಗಳ ನಡುವಿನ ದೊಡ್ಡ ಮಟ್ಟದ “ಸೂಪರ್ ಡೀಲ್” ಎಂದು ಕರೆಯಲಾಗಿದೆ. ಈ ಕ್ರಮದಿಂದ ಅಂತರರಾಷ್ಟ್ರೀಯ ವ್ಯಾಪಾರ ವಲಯದಲ್ಲಿ ದೊಡ್ಡ ಚರ್ಚೆ ಮೂಡಿದೆ.
* ದಕ್ಷಿಣ ಕೊರಿಯಾದ ಬೂಸಾನನಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ ಮತ್ತು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ ಅವರು ಭೇಟಿಯಾಗಿದ್ದು,ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಸುಮಾರು ಒಂದುವರೆ ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದರು.
🔹 2018ರಲ್ಲಿ ಆರಂಭವಾದ Trade War ಬಳಿಕ ಅಮೆರಿಕಾ ಚೀನಾದ ವಸ್ತುಗಳ ಮೇಲಿನ ಸುಂಕವನ್ನು ಹೆಚ್ಚಿಸಿತ್ತು.
🔹 ಇದು ಚೀನಾದ ಆರ್ಥಿಕ ಒತ್ತಡ ಹೆಚ್ಚಿಸಿ ಜಾಗತಿಕ ಸರಪಳಿ (Supply Chain) ಮೇಲೆ ಪರಿಣಾಮ ಬೀರಿತು.
🔹 ಈಗ ಸುಂಕ ಕಡಿತ ಮಾಡುವ ಮೂಲಕ ಎರಡೂ ದೇಶಗಳು ಆರ್ಥಿಕ ಸಹಕಾರದ ಹೊಸ ಹಂತಕ್ಕೆ ಬರಲು ನಿರ್ಧರಿಸಿವೆ.
* ಪ್ರಮುಖವಾಗಿ ಚೀನಾದ ಮುಖ್ಯ ಉತ್ಪನ್ನಗಳ ಮೇಲೆ ಸುಂಕ ಕಡಿತ, ತಂತ್ರಜ್ಞಾನ ಹೂಡಿಕೆ–ವ್ಯಾಪಾರಕ್ಕೆ ತೆರೆಯುವಿಕೆ,ಬೌದ್ಧಿಕಸ್ವತ್ತಿನ (IPR) ರಕ್ಷಣೆಗೆ ಒಪ್ಪಂದ,ಕೃಷಿ–ಉತ್ಪಾದನಾ ಕ್ಷೇತ್ರಗಳಲ್ಲಿ ವಿಶೇಷ ಪ್ರವೇಶ, ಬಿಲಿಯನ್‌ಗಟ್ಟಲೆ ಡಾಲರ್ ಮೌಲ್ಯದ ದೀರ್ಘ ಗಡುವಿನ ವ್ಯಾಪಾರ ಒಪ್ಪಂದ.
📉 ಟ್ಯಾರಿಫ್ ಇಳಿಕೆಯ ಪರಿಣಾಮಗಳು:
✅ ದ್ವಿಪಕ್ಷೀಯ ವ್ಯಾಪಾರದಲ್ಲಿ ಚಲನವಲನ:-ಆಮದು–ರಫ್ತು ಚಟುವಟಿಕೆ ಹೆಚ್ಚುವ ನಿರೀಕ್ಷೆ.
✅ ಮಾರುಕಟ್ಟೆಯ ಸ್ಥಿರತೆ:- ಷೇರು ಮಾರುಕಟ್ಟೆಯಲ್ಲಿ ಧನಾತ್ಮಕ ಪ್ರತಿಕ್ರಿಯೆ, ನಿವೇಶಕರ ವಿಶ್ವಾಸ ಹೆಚ್ಚಳ.
✅ ಗ್ರಾಹಕರಿಗೆ ಲಾಭ:-ಚೀನಾದ ಎಲೆಕ್ಟ್ರಾನಿಕ್, ಯಂತ್ರೋಪಕರಣಗಳು, ಬಳಕೆ ವಸ್ತುಗಳು ಅಮೆರಿಕಾದಲ್ಲಿ ಕಡಿಮೆ ಬೆಲೆಗೆ.
✅ ಚೀನಾದ ಆರ್ಥಿಕತೆ ಪುನರ್‌ಬಲ:-ವ್ಯಾಪಾರ ಕಡಿಮೆಯಾಗುತ್ತಿದ್ದ ಸಮಸ್ಯೆಗೆ ಪರಿಹಾರ.
🌎 ಜಾಗತಿಕ ಮಟ್ಟದಲ್ಲಿ ಪರಿಣಾಮ:
🔹 ಜಾಗತಿಕ ವ್ಯಾಪಾರ ಒತ್ತಡ ತಗ್ಗುವ ಸಾಧ್ಯತೆ.
🔹 ಏಷ್ಯಾ–ಯೂರೋಪ್ ಮಾರುಕಟ್ಟೆಗಳಲ್ಲಿ ಸುಧಾರಣೆ
🔹 ಡಾಲರ್ ಮೌಲ್ಯದಲ್ಲಿ ಸ್ಥಿರತೆ
🔹 ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧ ಬಲವರ್ಧನೆ
* ಈ ಸೂಪರ್ ಡೀಲ್ ಮೂಲಕ ಲಾಭದಾಯಕ ಉತ್ಪನ್ನಗಳು :
📌 ಎಲೆಕ್ಟ್ರಾನಿಕ್ಸ್
📌 ಆಟೋಮೊಬೈಲ್ ಭಾಗಗಳು
📌 ಮೆಷಿನರಿ
📌 ಕೃಷಿ ಉತ್ಪನ್ನಗಳು
📌 ಕಮ್ಯುನಿಕೇಶನ್ ಚಿಪ್ಸ್
ಶುಕ್ರವಾರ, 31 ಅಕ್ಟೋಬರ್ 2025
2:00 ಅಪರಾಹ್ನ
Daily PDF
📉 ಚೀನಾ ಮೇಲಿನ ಟ್ಯಾರಿಫ್ಗಳನ್ನು 57%ರಿಂದ 47%ಕ್ಕೆ ಇಳಿಸಿದ ಡೊನಾಲ್ಡ್ ಟ್ರಂಪ್; ಅಮೆರಿಕಾ–ಚೀನಾ “ಸೂಪರ್ ಡೀಲ್”.
Authored by:
Akshata Halli