➤ ತಮಿಳುನಾಡಿನ ವಿಶ್ವವಿದ್ಯಾಲಯ ಕಾರ್ಯಕ್ರಮದಲ್ಲಿ ರಾಜ್ಯ ಗೀತೆಯನ್ನು ಕೊನೆಯಲ್ಲಿ ಹಾಡಿಸಿ ಶಿಷ್ಟಾಚಾರ ಬದಲಾಯಿಸಿದ್ದನ್ನು ವಿರೋಧಿಸಿ, ಆರಂಭದಲ್ಲೇ 'ತಮಿಳು ತಾಯಿ ವಾಝು' ಹಾಡುವ ಸಾಂಪ್ರದಾಯಿಕ ಪದ್ಧತಿಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ 21 ಸಂಸದರು ರಾಜ್ಯಪಾಲ ಆರ್.ಎನ್. ರವಿ ಅವರಿಗೆ ಪತ್ರ ಬರೆದಿದ್ದಾರೆ.
➤ ಜುಲೈ 28 ರಂದು ತಿರುನೆಲ್ವೇಲಿಯ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜಭವನದ ಸೂಚನೆಯಂತೆ ಶಿಷ್ಟಾಚಾರ ಬದಲಾಯಿಸಲಾಗಿತ್ತು.ಕಾರ್ಯಕ್ರಮವನ್ನು 'ವಂದೇ ಮಾತರಂ' ಮೂಲಕ ಪ್ರಾರಂಭಿಸಿ, ನಂತರ 'ರಾಷ್ಟ್ರಗೀತೆ' (ಜನ ಗಣ ಮನ) ಮತ್ತು ಮೂರನೇ ಸ್ಥಾನದಲ್ಲಿ 'ತಮಿಳು ತಾಯಿ ವಾಝು' ಹಾಡಲಾಗಿತ್ತು.
➤ ವಿವಾದದ ಮೂಲ ಕಾರಣ: ತಮಿಳುನಾಡಿನಲ್ಲಿ ಕಳೆದ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಸಾರ್ವಜನಿಕ ಹಾಗೂ ಸರಕಾರಿ ಕಾರ್ಯಕ್ರಮಗಳ ಆರಂಭದಲ್ಲಿ ನಾಡಗೀತೆಯಾದ 'ತಮಿಳು ತಾಯಿ ವಾಝು' ಹಾಡುವುದು ಮತ್ತು ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವುದು ಸಾಮಾನ್ಯ ಶಿಷ್ಟಾಚಾರವಾಗಿತ್ತು. ಆದರೆ ತಿರುನೆಲ್ವೇಲಿಯ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ರಾಜಭವನದ ನಿರ್ದೇಶನದಂತೆ ನಾಡಗೀತೆಯನ್ನು ಮೂರನೇ ಸ್ಥಾನಕ್ಕೆ ಸರಿಸಿದ್ದು, ತಮಿಳುನಾಡಿನ ಜನರ ಸಾಂಸ್ಕೃತಿಕ ಅಸ್ಮಿತೆಗೆ ಹಾಗೂ ಗೀತೆ ರಚನಕಾರರಿಗೆ ಎಸಗಿದ ಅಪಮಾನ ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ (ಜಯ ಭಾರತ ಜನನಿಯ ತನುಜಾತೆ) ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ರಾಜ್ಯ ಗೀತೆಗಳಿಗೆ ಮೊದಲ ಆದ್ಯತೆಯ ಗೌರವ ನೀಡಿ, ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವ ಪದ್ಧತಿಯಿದೆ ಎಂಬುದನ್ನು ಸಂಸದರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶುಕ್ರವಾರ, 07 ಆಗಸ್ಟ್ 2026
10:42 ಪೂರ್ವಾಹ್ನ
Daily PDF
ತಮಿಳುನಾಡು ನಾಡಗೀತೆ ಶಿಷ್ಟಾಚಾರ ವಿವಾದ: ರಾಜ್ಯಪಾಲ ಆರ್.ಎನ್. ರವಿಗೆ ಸಂಸದರ ಮನವಿ
Authored by:
Akshata Halli