* ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಪ್ರತಿಷ್ಠಿತ 'ಮಹಾರಾಜ ಹರಿಸಿಂಗ್ ಪ್ರಶಸ್ತಿ, ಪ್ರದಾನ ಮಾಡಲಾಯಿತು. ಜಮ್ಮುವಿನ ಸತ್ಯಮ್ ರಿಸಾರ್ಟ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಈ ಗೌರವವನ್ನು ನೀಡಲಾಯಿತು.
* ಗುಲಿಸ್ತಾನ್ ನ್ಯೂಸ್ ನೆಟ್‌ವರ್ಕ್ ಆಯೋಜಿಸಿದ್ದ ಈ ಕಾರ್ಯಕ್ರಮವು ‘ಮಹಾರಾಜ ಹರಿಸಿಂಗ್ ಪೀಸ್ ಅಂಡ್ ಹಾರ್ಮನಿ ಅವಾರ್ಡ್ 2024-25’ ಭಾಗವಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಮತ್ತು ಸುಧಾರಣೆಗಳಿಗೆ ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಅವರ ನೀಡಿದ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ ನೀಡಲಾಯಿತು.
* ಸಿನ್ಹಾ ಅವರು ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಯೋಜಿಸುವಲ್ಲಿ ಮಹಾರಾಜ ಹರಿ ಸಿಂಗ್ ಅವರ ಪಾತ್ರವನ್ನು ಮತ್ತು ಸಾಮಾಜಿಕ ಸುಧಾರಣೆಗಳಿಗೆ ಅವರ ಕೊಡುಗೆಗಳನ್ನು ಎತ್ತಿ ತೋರಿಸಿದರು.
* ತಮ್ಮ ಭಾಷಣದಲ್ಲಿ ಎಲ್‌ಜಿ ಸಿನ್ಹಾ ಅವರು ದಿವಂಗತ ದೇವೆಂದರ್ ಸಿಂಗ್ ರಾಣಾ ಅವರಿಗೆ ಗೌರವ ಸಲ್ಲಿಸಿದರು, ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವಲ್ಲಿ ರಾಣಾ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು, ಅವರ ಕೊಡುಗೆಗಳು ಯಾವಾಗಲೂ ಸ್ಮರಣೀಯವಾಗಿವೆ ಎಂದು ಹೇಳಿದರು.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ 'ಮಹಾರಾಜ ಹರಿಸಿಂಗ್ ಪ್ರಶಸ್ತಿ'
Published by Yallamma G
29 ಜನವರಿ 2025