* ಮಾಜಿ ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ಡಿ.ಆರ್. ವಿಜಯ್ ಕುಮಾರ್ ಬುಧವಾರ(ಜುಲೈ 09) ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ನೂತನ ಗೌರವ ಕೋಶಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ಸಮಾರಂಭವು ಕಸಾಪದ ಕೇಂದ್ರ ಕಚೇರಿಯಲ್ಲಿ ನಡೆಯಿತು.
* ವಿಜಯ್ ಕುಮಾರ್ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ 38 ವರ್ಷಗಳ ಕಾಲ ಹಣಕಾಸು ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿಭಾಯಿಸಿ ಅಪಾರ ಅನುಭವ ಹೊಂದಿದ್ದಾರೆ.
* ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ನಿಷ್ಠೆಯುಳ್ಳ ವಿಜಯ್ ಕುಮಾರ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
* ಕಸಾಪ ನಿಬಂಧನೆ 9(3) ಅಡಿಯಲ್ಲಿ ಮಾನ್ಯ ಅಧ್ಯಕ್ಷರು ಹೊಂದಿರುವ ಅಧಿಕಾರದಡಿ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರಿಂದ ವಿಜಯ್ ಕುಮಾರ್ ಅವರನ್ನು ಗೌರವ ಕೋಶಾಧ್ಯಕ್ಷರಾಗಿ ನಾಮನಿರ್ದೇಶನ ಮಾಡಲಾಯಿತು.
ಕಸಾಪದ ಗೌರವ ಕೋಶಾಧ್ಯಕ್ಷರಾಗಿ ಡಿ.ಆರ್. ವಿಜಯ್ ಕುಮಾರ್ ಆಯ್ಕೆ
Published by Jyoti Angadi
10 ಜುಲೈ 2025