* ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ ಬೆಂಗಳೂರು ಸೂಕ್ತ ಸೌಕರ್ಯಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಜುಲೈ 31 ಮತ್ತು ಆಗಸ್ಟ್ 1 ರಂದು ‘ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮ್ಮೇಳನ’ ಆಯೋಜಿಸಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ.
* ಇದು ದೇಶದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಸಮಾವೇಶವಾಗಿದ್ದು, ಮೊದಲ ದಿನ ನೊಬೆಲ್ ಪುರಸ್ಕೃತರಾದ ಪ್ರೊ. ಡಂಕನ್ ಹಲ್ದಾನೆ ಮತ್ತು ಪ್ರೊ. ಡೇವಿಡ್ ಗ್ರಾಸ್ ಮುಖ್ಯ ಭಾಷಣ ಮಾಡಲಿದ್ದಾರೆ.
* ಸಮಾವೇಶದಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್, ಫೈನಾನ್ಸ್, ಹೆಲ್ತ್ ಕೇರ್, ಸೆಕ್ಯೂರಿಟಿ, ಹಾರ್ಡ್‌ವೇರ್ ಮತ್ತು ಆರ್ಟ್ ಕ್ಷೇತ್ರಗಳಲ್ಲಿ ತಜ್ಞರಿಂದ ಮಾಹಿತಿ ವಿನಿಮಯ ನಡೆಯಲಿದೆ.
* ರಾಜ್ಯ ಸರ್ಕಾರ ಕರ್ನಾಟಕವನ್ನು ಕ್ವಾಂಟಮ್ ತಂತ್ರಜ್ಞಾನದಲ್ಲಿ ಮುಂಚೂಣಿ ರಾಜ್ಯವನ್ನಾಗಿ ರೂಪಿಸಲು ಬದ್ಧವಾಗಿದೆ. ಈ ದಿಕ್ಕಿನಲ್ಲಿ ‘ಕರ್ನಾಟಕ ಕ್ವಾಂಟಮ್ ಕ್ರಿಯಾ ಯೋಜನೆ’ ರೂಪಿಸಲಾಗುತ್ತಿದ್ದು, ತಜ್ಞರನ್ನೊಳಗೊಂಡ ಕಾರ್ಯಪಡೆ ರಚನೆಗೂ ಸಿದ್ಧತೆ ನಡೆಯುತ್ತಿದೆ.
* ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ಕೆಸ್ಟೆಪ್ಸ್ ನಿರ್ದೇಶಕ ಸದಾಶಿವ ಪ್ರಭು ಹಾಗೂ ಸಮ್ಮೇಳನದ ಸಂಚಾಲಕರಾದ ಪ್ರೊ. ಅರಿಂದಮ್ ಘೋಷ್ ಮತ್ತು ಪ್ರೊ. ಅಕ್ಷಯ್ ನಾಯ್ಕ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಎರಡು ದಿನಗಳ ಕ್ವಾಂಟಮ್ ಇಂಡಿಯಾ ಸಮಾವೇಶ
Published by Jyoti Angadi
10 ಜುಲೈ 2025