* ಕನ್ನಡ ಸಾಹಿತ್ಯ ಪರಿಷತ್ತು ನೀಡುವ 'ಡಾ. ಮಳಲಿ ವಸಂತ ಕುಮಾರ್ ಪ್ರಶಸ್ತಿ'ಗೆ ವಿಮರ್ಶಕ ಹಾಗೂ ಮಾಜಿ ಪ್ರಾಧ್ಯಾಪಕ ಡಾ. ಸಿ. ನಾಗಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.
* ಬರಹಗಾರ ಮಳಲಿ ವಸಂತ ಕುಮಾರ್ ಅವರ ನೆನಪಿನಲ್ಲಿ ಕುಟುಂಬಸ್ಥರು ಸ್ಥಾಪಿಸಿದ ದತ್ತಿ ನಿಧಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ. ಅವರು ಕನ್ನಡ ಪರ ಹೋರಾಟಗಾರರಾಗಿದ್ದು, 46 ಕೃತಿಗಳನ್ನು ರಚಿಸಿದ್ದರು.
* ಕಸಾಪ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಪ್ರಶಸ್ತಿ ಕನ್ನಡ ಸೇವೆಗೆ ಮಹತ್ವದ ಕೊಡುಗೆ ನೀಡಿದವರು ಮತ್ತು ಹೋರಾಟಗಾರರಿಗೆ ನೀಡಲಾಗುತ್ತದೆ.
* ನಾಗಣ್ಣ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಭಾಷಾಂತರ ಕ್ಷೇತ್ರದಲ್ಲೂ ಅವರು ಅಪೂರ್ವ ಕೊಡುಗೆ ನೀಡಿದ್ದಾರೆ ಎಂದು ಕಸಾಪ ಮಾಧ್ಯಮ ವಿಭಾಗದ ಎನ್.ಎಸ್. ಶ್ರೀಧರ ಮೂರ್ತಿ ತಿಳಿಸಿದ್ದಾರೆ.
ಕಸಾಪ ದತ್ತಿನಿಧಿ ಪ್ರಶಸ್ತಿಗೆ "ಡಾ.ಸಿ.ನಾಗಣ್ಣ" ಆಯ್ಕೆ
Published by Jyoti Angadi
21 ಜುಲೈ 2025