* ರಾಜ್ಯದಲ್ಲಿ ಗೋಬಿ ಮಂಚೂರಿ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಸುದನ್ನು ಮತ್ತು ಕಾಟನ್ ಕ್ಯಾಂಡಿಯಲ್ಲಿ (ಬಾಂಬೆ ಮಿಠಾಯಿ) 'ರೊಡಮೈನ್ ಬಿ' ಹಾಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೃತಕ ಬಣ್ಣ ಬಳಸುವುದನ್ನು ನಿರ್ಬಂಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
* ರಸ್ತೆ ಬದಿ ಮಾಡಿ ಕೊಡುವ ಗೋಬಿ ಮಂಚೂರಿ ಮಕ್ಕಳಿಂದ ಹಿಡಿದು ವೃದ್ದರವರೆಗೆ ಭಾರಿ ಅಚ್ಚುಮೆಚ್ಚು ಆದರೆ ಗೋಬಿ ಮಂಚೂರಿಯಲ್ಲಿ Sunset Yellow
ಹಾಗೂ Tartrazine ಹಾನಿಕಾರಕ ಅಂಶ ಇರೋದ್ರಿಂದ ಎರಡೂ ರಾಸಾಯನಿಕ ಅಂಶಗಳನ್ನು ಬಳಕೆ ಮಾಡದೇ ಇರುವ ಬಗ್ಗೆ ಆರೋಗ್ಯ ಸಚಿವರು ಘೋಷಣೆ ಮಾಡಲಿದ್ದಾರೆ.
* ರೊಡಮೈನ್ ಬಿ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳಿದ್ದು, ಕಣ್ಣು ದೃಷ್ಟಿ ಸಮಸ್ಯೆ ಹಾಗೂ ಲಿವರ್ ಸಂಬಂಧಿ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ.
* ಈ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಪರಾಧ ಸಾಬೀತಾದರೆ 7 ವರ್ಷದಿಂದ ಜೀವಾವಧಿ ತನಕ ಜೈಲು ಶಿಕ್ಷೆ, 10 ಲಕ್ಷ ರೂಪಾಯಿ ದಂಡವೂ ವಿಧಿಸುವುದಕ್ಕೆ ಅವಕಾಶ ಇದೆ ಎಂದು ಸರ್ಕಾರ ತಿಳಿಸಿದೆ.
* ಗೋಬಿ ಮಂಚೂರಿಯನ್ ನ ಸಂಬಂಧಿಸಿದ ಸಮೀಕ್ಷೆಯಲ್ಲಿ 171 ಮಾದರಿಗಳನ್ನು ಪರೀಕ್ಷೆಮಾಡಲಾಗಿತ್ತು. ಇದರಲ್ಲಿ 107ರಲ್ಲಿ ರೋಡೋಮೈನ್ ಬಿ ಹಾಗೂ ಟಾರ್ ಟ್ರಾಸೈನ್ಸ್ ನಂತಹ ಅಸುರಕ್ಷಿತ ಕೃತಕ ಬಣ್ಣಗಳನ್ನು ಬಳಸಿರುವುದು ದೃಢವಾಗಿದೆ.
* ಅದೇ ರೀತಿ ಕಾಟನ್ ಕ್ಯಾಂಡಿಯಲ್ಲಿ 25 ಮಾದರಿ ಸಂಗ್ರಹಿಸಿ ನಡೆಸಿದ ಪರೀಕ್ಷೆಯಲ್ಲಿ 15 ಮಾದರಿಗಳಲ್ಲಿ ಟಾರ್‌ಟ್ರಾಸೈನ್, ಸನ್ ಸೆಟ್ ಯೆಲ್ಲೋ, ರೋಡಮೈನ್ ಬಿ ನಂತಹ ಕೃತಕ ಬಣ್ಣ ಕಂಡುಬಂದಿವೆ.
ಕರ್ನಾಟಕದಲ್ಲಿ ಗೋಬಿ ಮತ್ತು ಕಾಟನ್ ಕ್ಯಾಂಡಿ ಕೃತಕ ಬಣ್ಣ ಬಳಕೆ ನಿರ್ಬಂಧ
Published by Bhagya R K
12 ಮಾರ್ಚ್ 2024