* ಭವಿಷ್ಯದ ಯುದ್ಧಕ್ಕೆ ಅಗತ್ಯವಾದ ತಾಂತ್ರಿಕವಾಗಿ ಮುಂದುವರಿದ 1,770 ಭವಿಷ್ಯದ ಸಿದ್ಧ ಯುದ್ಧ ವಾಹನಗಳನ್ನು (FRCV) ಗಳನ್ನೂ ಖರೀದಿಸಲು ಭಾರತೀಯ ಸೇನೆ ಯೋಜನೆ ರೂಪಿಸಿದೆ
* 2030 ರಿಂದ ಹಳೆಯ ರಷ್ಯನ್ ಮೂಲದ T-72 ಟ್ಯಾಂಕ್‌ಗಳನ್ನು ಬದಲಿಸಲು ಭಾರತದಲ್ಲಿ 1,770 ಪ್ಯೂಚರ್ ರೆಡಿ ಕಂಬಾಟ್ ವೆಹಿಕಲ್ಸ್ (FRCV) ಉತ್ಪಾದಿಸಲು ಅಂದಾಜು 57,000 ಕೋಟಿ ಡಾಲರ್ ಗಳ ಮೆಗಾ ಯೋಜನೆಯಡಿ ಈ ಖರೀದಿ ಮಾಡಲಾಗುತ್ತದೆ.
* 1969ರಲ್ಲಿ ಪ್ರಾರಂಭವಾದ ಟಿ-72 ಟ್ಯಾಂಕ್ ಸೋವಿಯತ್ ಒಕ್ಕೂಟದ ಮುಖ್ಯ ಸಮರ ಟ್ಯಾಂಕ್‌ಗಳ ಕುಟುಂಬಕ್ಕೆ ಸೇರಿದ ಟ್ಯಾಂಕ್ ಆಗಿದೆ. ಸುಮಾರು 25,000 ಟಿ-72 ಟ್ಯಾಂಕ್ ಗಳನ್ನು ಉತ್ಪಾದಿಸಲಾಗಿತ್ತು.
* ಟಿ-72 ಟ್ಯಾಂಕ್ ಗಳನ್ನು ವ್ಯಾಪಕವಾಗಿ ರಫ್ತು ಮಾಡಲಾಗಿದ್ದು 40 ದೇಶಗಳ ಸೇನೆಗಳಲ್ಲಿ ಸೇವೆ ಸಲ್ಲಿಸಿವೆ. ಟಿ-72 ಮಾದರಿಯ ಹಲವು ಆಧುನಿಕ ಟ್ಯಾಂಕ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆ ಇಂದಿಗೂ ಮುಂದುವರಿದಿದೆ.
* ಮೊದಲ ಬ್ಯಾಚ್‌ನಲ್ಲಿ 590 ಪ್ಯೂಚರ್ ರೆಡಿ ಕಂಬಾಟ್ ವೆಹಿಕಲ್ಸ್ (FRCV)ಗಳನ್ನು ಸೇನೆಗೆ ಸೇರ್ಪಡೆ ಮಾಡಲಾಗುತ್ತದೆ. ಪ್ರತಿ ಬ್ಯಾಚ್‌ನ ಸಾಮರ್ಥ್ಯ ಹೆಚ್ಚಳವು ಶಸ್ತ್ರಾಸ್ತ್ರ, ಸಂಚಾರ ಮತ್ತು ಸಶಸ್ತ್ರ ರಕ್ಷಣಾ ವ್ಯವಸ್ಥೆಗಳ ಉನ್ನತೀಕರಣವನ್ನು ಒಳಗೊಂಡಿರುತ್ತದೆ.
ಭಾರತೀಯ ಸೇವೆಯಿಂದ ಪ್ಯೂಚರ್ ರೆಡಿ ಕಂಬಾಟ್ ವೆಹಿಕಲ್ಸ್ (FRCV) ಖರೀದಿ
Published by Bhagya R K
12 ಮಾರ್ಚ್ 2024