* ಕರ್ನಾಟಕದಲ್ಲಿ ಹಲವು ಉತ್ತೇಜನಗಳನ್ನು ನೀಡುವ ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸಲಾಗಿದೆ.
* ರಾಜ್ಯ ಸರಕಾರವು ಮುಂದಿನ ಐದು ವರ್ಷಗಳ (2025-30) ಉದ್ಯಮ ಬೆಳವಣಿಗೆಗೆ ರೂಪಿಸಿರುವ ನೂತನ ಕೈಗಾರಿಕಾ ನೀತಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದ್ದಾರೆ.
* ಹೊಸ ನೀತಿಯು ಇನ್ನು ಐದು ವರ್ಷಗಳಲ್ಲಿ ರಾಜ್ಯಕ್ಕೆ 7.50 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆ ಆಕರ್ಷಿಸುವ 20 ಲಕ್ಷ ಉದ್ಯೋಗ ಸೃಷ್ಟಿಸುವ ಮತ್ತು ಸನ್ ರೈಸ್ ವಲಯದಲ್ಲಿ ರಾಜ್ಯವನ್ನು ಇಡೀ ದೇಶಕ್ಕೆ ನಂಬರ್ ಒನ್ ಆಗಿ ಪ್ರತಿಷ್ಠಾಪಿಸುವ ಹೆಗ್ಗುರುತುಗಳನ್ನು ಹೊಂದಿದೆ.
* ಬೆಂಗಳೂರಿನ ಆಚೆಗೆ ಹಾಗೂ ಹಿಂದುಳಿದ ಮತ್ತು ಅತೀ ಹಿಂದುಳಿದ ಜಿಲ್ಲೆ/ ತಾಲೂಕುಗಳಿಗೆ ಆದ್ಯತೆ ನೀಡಲಾಗಿದೆ. ಇದು ಕೈಗಾರಿಕಾ ಬೆಳವಣಿಗೆ ಆಧರಿಸಿ ಪ್ರದೇಶವಾರು ಪ್ರೋತ್ಸಾಹಕ ಭತ್ಯೆಗಳನ್ನು ನೀಡಲಿದೆ ಎಂದು ಸರಕಾರ ತಿಳಿಸಿದೆ.
* ಕ್ವಿನ್ ಸಿಟಿಯನ್ನು ಅಭಿವೃದ್ಧಿಪಡಿಸಲು ಕೆಐಎಡಿಬಿ ಮೂಲಕ ಶೇ.30 ರಷ್ಟು ಜಾಗವನ್ನು ಎಂಎಸ್ಎಂಇಗಳಿಗೆ ಮೀಸಲಿಟ್ಟು, ತಂತ್ರಜ್ಞಾನ, ಕೌಶಲ್ಯ, ಕ್ಲಸ್ಟರ್ ಅಭಿವೃದ್ಧಿ ಮತ್ತು ಪ್ರೋತ್ಸಾಹ ಭತ್ಯೆಗಳಿಗೆ ಒತ್ತು ನೀಡಲಾಗುತ್ತದೆ.
* ಕೆಲವು ಪ್ರದೇಶಗಳನ್ನು ವಿಶೇಷ ಹೂಡಿಕೆ ಪ್ರದೇಶಗಳಾಗಿ ಘೋಷಿಸಿ, ಉದ್ಯಮಗಳ ಆರ್ & ಡಿ ಮತ್ತು ಉತ್ಪಾದನೆಯನ್ನು ಒಂದೇ ಕಡೆ ಉತ್ತೇಜಿಸಲಾಗುವುದು. ಹೂಡಿಕೆದಾರರು ಕೇವೆಕ್ಸ್ ಸಬ್ಸಿಡಿ ಅಥವಾ ಉತ್ಪಾದನೆ ಆಧರಿತ ಪ್ರೋತ್ಸಾಹ ಭತ್ಯೆಯ ಆಯ್ಕೆ ಪಡೆಯುವ ಅವಕಾಶವನ್ನು ಹೊಸ ನೀತಿ ನೀಡುತ್ತದೆ.
* ಬೃಹತ್ ಯೋಜನೆಗಳಿಗೆ ಸಿಗುವ ಸೌಲಭ್ಯ
- ಪಿಎಲ್‌ಐ ಅಥವಾ ವಿಎಫ್ ಎನ ಶೇ.10ರಿಂದ 25ರಷ್ಟು ಬಂಡವಾಳ ವೆಚ್ಚ ಸಬ್ಸಿಡಿ
- ನಂಜುಂಡಪ್ಪ ವರದಿಯಲ್ಲಿ ಗುರುತಿಸಿರುವ ಹಿಂದುಳಿದ ಮತ್ತು ಅತೀ ಹಿಂದುಳಿದ
- ತಾಲೂಕುಗಳಲ್ಲಿನ ಹೂಡಿಕೆಗೆ ಕ್ರಮವಾಗಿ ಶೇ. 3 ಮತ್ತು
- ಶೇ. 5ರಷ್ಟು ಹೆಚ್ಚುವರಿ ಸಬ್ಸಿಡಿ
- ಖಾಸಗಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ಪ್ರೋತ್ಸಾಹ ಭತ್ಯೆ ಮತ್ತು
- ಉದ್ಯೋಗ ಸೃಷ್ಟಿ ಮತ್ತು ಮಹಿಳಾ ಉದ್ಯೋಗಿಗಳ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಸಬ್ಸಿಡಿ
- ಆರ್‌ಡಿ ಜತೆಗೆ ಉತ್ಪಾದನಾ ಘಟಕ ಸ್ಥಾಪನೆಗೆ ಉತ್ತೇಜನ
- ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ ವಿನಾಯಿತಿ
- ಭೂ ಪರಿವರ್ತನೆ ಶುಲ್ಕ ವಾಪಸ್
* ಹೊಸ ನೀತಿ
• ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಶೇ. 10ರಿಂದ 30ರಷ್ಟು ಕ್ಯಾಪಿಟಲ್ ಸಬ್ಸಿಡಿ
• ಮುದ್ರಾಂಕ ಮತ್ತು ನೋಂದಣಿ ಶುಲ್ಕ ವಿನಾಯಿತಿ
• ಭೂ ಪರಿವರ್ತನೆ ಶುಲ್ಕ ವಾಪಸ್
• ಎಂಎಸ್‌ಎಂಇಗಳಿಗೆ ವಿದ್ಯುತ್ ಬಿಲ್ ಮೇಲಿನ ತೆರಿಗೆಯಿಂದ ವಿನಾಯಿತಿ
• ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ ವಿದ್ಯುತ್ ಸಬ್ಸಿಡಿ
• ಮಳೆ ನೀರು ಸಂಸ್ಕರಣೆ ಮತ್ತು ತ್ಯಾಜ್ಯ ನೀರು ಮರುಪೂರಣಕ್ಕೆ ಪ್ರೋತ್ಸಾಹ ಭತ್ಯೆ
• ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪನೆಗೆ ಪ್ರೋತ್ಸಾಹ ಭತ್ಯೆ
ಗುರುವಾರ, 13 ಫೆಬ್ರುವರಿ 2025
3:39 ಅಪರಾಹ್ನ
Daily PDF
ಕರ್ನಾಟಕದ ನೂತನ ಕೈಗಾರಿಕಾ ನೀತಿ ಬಿಡುಗಡೆ : 20 ಲಕ್ಷ ಉದ್ಯೋಗ ಸೃಷ್ಟಿ
Authored by:
Jyoti Angadi