* ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 'ಎಐ ಆ್ಯಕ್ಷನ್' ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ಭೇಟಿಯಾಗಿದ್ದು, ಭಾರತದ ಡಿಜಿಟಲ್ ರೂಪಾಂತರ ಕುರಿತು ಚರ್ಚೆ ನಡೆಸಿದ್ದಾರೆ.
* ಕೃತಕ ಬುದ್ಧಿಮತ್ತೆಯ (ಎಐ) ನಿರ್ವಹಣಾ ವ್ಯವಸ್ಥೆಯಿಂದ ಭಾರತಕ್ಕೆ ಅಗಬಹುದಾದ ಅನುಕೂಲ, ಅನನುಕೂಲಗಳ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.
* 'ಪ್ಯಾರಿಸ್‌ನಲ್ಲಿ ನಡೆದ 'ಎಐ ಆಕ್ಷನ್' ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವುದು ಸಂತೋಷವಾಗಿದೆ.
* ಕೃತಕ ಬುದ್ಧಿಮತ್ತೆಯಿಂದ (ಎಐ) ಭಾರತಕ್ಕೆ ಆಗುವಂತಹ ಪ್ರಯೋಜನ ಮತ್ತು ಭಾರತದ ಡಿಜಿಟಲ್ ರೂಪಾಂತರದಲ್ಲಿ ನಾವು ಒಟ್ಟಿಗೆ ಕೆಲಸ
ಮಾಡುವ ವಿಧಾನಗಳ ಬಗ್ಗೆ ಚರ್ಚಿಸಿದ್ದೇವೆ' ಎಂದು ಪಿಚೈ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
* ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನ ಆವಿಷ್ಕಾರಗೊಂಡಾಗ ಯಾವುದೇ ಉದ್ಯೋಗಕ್ಕೆ ಕುತ್ತು ಬರುವುದಿಲ್ಲ. ಕೆಲಸದ ಸ್ವಭಾವ
ಬದಲಾಗಬಹುದೇ ವಿನಾ ಕಡಿಮೆಯಾಗುವುದಿಲ್ಲ. ಬದಲಾಗಿ ಹೊಸಹೊಸ ರೀತಿಯ ಉದ್ಯೋಗಗಳು ಸೃಷ್ಟಿಯಾಗುತ್ತವೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ಗೂಗಲ್ ಸಿಇಒ ಸುಂದರ್ ಪಿಚೈ ಜೊತೆ ಮೋದಿ ಮಾತುಕತೆ
Published by Jyoti Angadi
13 ಫೆಬ್ರವರಿ 2025