* ನ್ಯಾಯಮೂರ್ತಿ ವಿಭು ಬಖ್ರು ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕೇಂದ್ರ ಸರ್ಕಾರ ನೇಮಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆದೇಶದಂತೆ ಅವರು ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ.
* 1966ರಲ್ಲಿ ನಾಗಪುರದಲ್ಲಿ ಜನಿಸಿದ ಬಖ್ರು ಅವರು ದೆಹಲಿ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಪಡೆದರು. ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿ (1987), ಚಾರ್ಟರ್ಡ್ ಅಕೌಂಟೆಂಟ್ ಅರ್ಹತೆ (1989), ಮತ್ತು ಎಲ್‌ಎಲ್‌ಬಿ ಪದವಿ (1990) ಪಡೆದಿದ್ದಾರೆ.
* ವಿಭು ಬಖ್ರು ಅವರು ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ಮತ್ತು ಇತರೆ ನ್ಯಾಯಮಂಡಳಿಗಳಲ್ಲಿ ವಕೀಲಿಕೆ ನಡೆಸಿದ್ದಾರೆ. 2011ರಲ್ಲಿ ಹಿರಿಯ ವಕೀಲರಾಗಿ ಪ್ರಮೋಶನ್ ಪಡೆದ ಅವರು 2013ರಲ್ಲಿ ದೆಹಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2015ರಲ್ಲಿ ಅವರು ಕಾಯಂಗೊಂಡ ನ್ಯಾಯಮೂರ್ತಿಯಾಗಿ ಪರಿಗಣಿಸಲ್ಪಟ್ಟರು.
* ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಕಾಲೇಜಿಯಂ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ವಿಭು ಬಖ್ರು ಅವರನ್ನು ಶಿಫಾರಸು ಮಾಡಿತ್ತು.
ಕರ್ನಾಟಕದ ಹೈಕೋರ್ಟ್ ಗೆ ಮುಖ್ಯ ನ್ಯಾ.ಮೂರ್ತಿಯಾಗಿ ವಿಭು ಬಖ್ರು
Published by Jyoti Angadi
15 ಜುಲೈ 2025