* 'ಕೊಪ್ಪಳ ಜಿಲ್ಲೆಯ ಗಂಗಾವತಿ, ಮುನಿರಾಬಾದ್ ಮತ್ತು ಬಾನಾಪುರ ರೈಲ್ವೆ ನಿಲ್ದಾಣಗಳಿಗೆ ಕ್ರಮವಾಗಿ ಅಂಜನಾದ್ರಿ (ಕಿಷ್ಕಿಂಧಾ), ಹುಲಿಗೆಮ್ಮ ದೇವಿ ಮತ್ತು ಮಹಾತ್ಮ ಗಾಂಧಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ ಎಂದು ನವೆಂಬರ್ 24 ರಂದು (ಭಾನುವಾರ) ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಅವರು ತಿಳಿಸಿದ್ದಾರೆ.
* ಅಂಜನಾದ್ರಿಯು 'ರಾಮಾಯಣ'ದಲ್ಲಿ ಬರುವ ಆಂಜನೇಯನ ಜನ್ಮಸ್ಥಳವಾಗಿದೆ. ಹುಲಿಗೆಮ್ಮದೇವಿ ಈ ಭಾಗದ ಜನಪ್ರಿಯ ಜನಪದ ದೇವತೆಯಾಗಿದೆ. ಭಾನಾಪುರಕ್ಕೆ ಭೇಟಿನೀಡಿದ್ದರ ಸ್ಮರಣೆಗಾಗಿ ಮಹಾತ್ಮ ಗಾಂಧಿ ಅವರ ಹೆಸರಿಡಲಾಗುತ್ತಿದೆ,'' ಎಂದು ಸಚಿವರು ತಿಳಿಸಿದ್ದಾರೆ.
* ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ಈ ಮೂರು ನಿಲ್ದಾಣಗಳಿಗೆ ಮರುನಾಮಕರಣ ಮಾಡುವುದರ ಹಿಂದೆ ಜನರ ಭಾವನೆಗಳಿಗೆ ಮನ್ನಣೆ ನೀಡಿದಂತೆ ಆಗುತ್ತದೆ.
ಕರ್ನಾಟಕದ 3 ರೈಲ್ವೆ ನಿಲ್ದಾಣಗಳಿಗೆ ಮರುನಾಮಕರಣ : ಅಂಜನಾದ್ರಿ, ಹುಲಿಗೆಮ್ಮ ಮತ್ತು ಮಹಾತ್ಮಗಾಂಧಿ ಹೆಸರುಗಳು ಶಿಫಾರಸು
Published by Bhagya R K
26 ನವೆಂಬರ್ 2024