* ಮಾರಿಷಸ್ ರಾಜಧಾನಿ ಪೋರ್ಟ್ ಲೂಯಿಸ್‌ನಲ್ಲಿ ಇತ್ತೀಚೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರ (ಎನ್‌ಎಸ್‌ಎ) ಮಟ್ಟದ ಕೊಲಂಬೋ ಭದ್ರತಾ ಸಮಾವೇಶ (ಕೊಲಂಬೋ ಸೆಕ್ಯುರಿಟಿ ಕನ್‌ಪ್ಲೇವ್-ಸಿಎಸ್‌ಸಿ) ನಡೆಯಿತು.
* ರಾಷ್ಟ್ರೀಯ ಭದ್ರತಾ ಸಲಹೆಗಾರ ಮಟ್ಟದ 6ನೇ ಸಭೆಯಾಗಿದ್ದು, ಕೊಲಂಬೋ ಸೆಕ್ಯುರಿಟಿ ಕಾನ್‌ಪ್ಲೇವ್‌ನ ಸದಸ್ಯ ರಾಷ್ಟ್ರಗಳು ಸಮಾವೇಶದಲ್ಲಿ ಭಾಗವಹಿಸಿದ್ದವು.
* ಸಿಎಸ್‌ಸಿಯ 5ನೇ ಎನ್‌ಎಸ್‌ಎ ಮಟ್ಟದ ಸಭೆಯಲ್ಲಿ ಕೈಗೊಳ್ಳಲಾಗಿದ್ದ ನಿರ್ಧಾರಗಳನ್ನು 6ನೇ ಸಭೆ ಪರಿಶೀಲಿಸಿತು. ಹಾಗೂ 2024ರ ಚಟುವಟಿಕೆಗಳ ನೀಲನಕ್ಷೆಯನ್ನು ರೂಪಿಸಲು ಸಭೆ ಒಪ್ಪಿತು.
* ಹಿಂದು ಮಹಾಸಾಗರ ವಲಯದಲ್ಲಿ ಸಾಂಪ್ರದಾಯಿಕ, ಸಾಂಪ್ರದಾಯಿಕೇತರ, ಹೈಬ್ರಿಡ್ ಸವಾಲು ಎದುರಿಸಿ ಈ ವಲಯದಲ್ಲಿ ಸುರಕ್ಷತೆ, ಭದ್ರತೆ, ಸ್ಥಿರತೆ ಖಾತರಿಪಡಿಸುವಲ್ಲಿ ಸಿಎಸ್‌ಸಿಯ ಪಾತ್ರ ಹೊಣೆಗಾರಿಕೆಯನ್ನು ಎನ್‌ಎಸ್‌ಎ ಮಟ್ಟದ ಸಭೆ ಪುನರುಚ್ಚರಿಸಿತು.
* 4ನೇ ಸದಸ್ಯ ರಾಷ್ಟ್ರ : ಸಿಎಸ್ ಸಿಯ 5 ನೇ ಎನ್ ಎಸ್ ಎ ಮಟ್ಟದ ಸಭೆಯಲ್ಲಿ ಮಾರಿಷಸ್ ಅನ್ನು ಕೂಟದ 4ನೇ ಸದಸ್ಯ ದೇಶವನ್ನಾಗಿ ಸೇರಿಸಿಕೊಳ್ಳಲಾಗಿತ್ತು. ಸಿಎಸ್‌ಸಿಯನ್ನು ಸಾಗರಯಾನ ಭದ್ರತಾ ಸಹಕಾರದ ತ್ರಿಪಕ್ಷೀಯ ಕೂಟ ಎಂದು ಕರೆಯಲಾಗುತ್ತಿತ್ತು.
* 2020ರ ನವೆಂಬರ್ 28ರಂದು ನಡೆದ ನಾಲ್ಕನೇ ಎನ್‌ಎಸ್‌ಎ ಮಟ್ಟದ ಸಭೆಯಲ್ಲಿ ಕೂಟದ ಅವಕಾಶವನ್ನು ವಿಸ್ತರಿಸಲು ಹಾಗೂ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಲು ಅಂದಿನ ಸದಸ್ಯ ದೇಶಗಳಾದ ಭಾರತ, ಶ್ರೀಲಂಕಾ ಮತ್ತು ಮಾಲೀಮ್ಸ್ ಒಪ್ಪಿದ್ದವು.
ಶನಿವಾರ, 13 ಜನವರಿ 2024
1:05 ಅಪರಾಹ್ನ
Daily PDF
ಕೊಲಂಬೋ ಭದ್ರತಾ ಸಮಾವೇಶ
Authored by:
Bhagya R K