* ಭಾರತೀಯ ಮೂಲದ ಲೇಖಕಿ ಮತ್ತು ನಾಟಕಕಾರ್ತಿ ಕಮಲಾದೇವಿ ಅರವಿಂದನ್ ಸಿಂಗಾಪುರದ ‘ವುಮೆನ್ಸ್ ಹಾಲ್ ಆಫ್ ಫೇಮ್’ ಗೌರವಕ್ಕೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಗೆ ಆರು ಮಂದಿಯನ್ನು ಆಯ್ಕೆ ಮಾಡಲಾಗಿದೆ.
* 2014ರಿಂದ 198 ಮಹಿಳೆಯರು ಸಿಂಗಾಪುರ ಮಹಿಳಾ ಸಂಘಟನೆಗಳ ಮಂಡಳಿಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
* ಲಿಂಗ ಸಮಾನತೆಯಲ್ಲಿ ಪ್ರಗತಿ ಮತ್ತು ಸಿಂಗಾಪುರದ ಇತಿಹಾಸ, ಸಮಾಜ, ಪ್ರಗತಿಗೆ ಕೊಡುಗೆ ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.
* ಅರವಿಂದನ್ ಅವರು ತಮಿಳು ಮತ್ತು ಮಲಯಾಳ ಲೇಖಕಿಯಾಗಿದ್ದು, ಅವರ ಕೆಲವು ಬರಹಗಳು ಇಂಗ್ಲಿಷ್ ಭಾಷೆಗೆ ಅನುವಾದವಾಗಿವೆ.
* ಅವರು 160 ಸಣ್ಣಕತೆಗಳು, 18 ನಾಟಕಗಳು, 300 ರೇಡಿಯೊ ನಾಟಕಗಳು ಮತ್ತು 5 ಪುಸ್ತಕಗಳನ್ನು ರಚಿಸಿದ್ದಾರೆ.
ಸೋಮವಾರ, 24 ಮಾರ್ಚ್ 2025
4:23 ಅಪರಾಹ್ನ
Daily PDF
ಕಮಲಾದೇವಿ ಸಿಂಗಪುರದ ‘ವುಮೆನ್ಸ್ ಹಾಲ್ ಆಫ್ ಫೇಮ್’ ಗೌರವ
Authored by:
Jyoti Angadi