* ಭಾರತ ಈ ಆರ್ಥಿಕ ವರ್ಷದಲ್ಲಿ 100 ಕೋಟಿ ಟನ್ ಕಲ್ಲಿದ್ದಲ್ಲು ಉತ್ಪಾದನೆ ದಾಟಿದ್ದು, ಇದನ್ನು ಪ್ರಧಾನಿ ಮೋದಿ ಹೆಮ್ಮೆಯ ಕ್ಷಣವೆಂದು ವಿವರಿಸಿದ್ದಾರೆ.
* ಈ ಹಿಂದೆ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಮೋದಿ ಅವರು ಭಾರತ ಶತಕೋಟಿ ಟನ್ ಕಲ್ಲಿದ್ದಲ್ಲು ಉತ್ಪಾದನೆ ಮೈಲಿಗಲ್ಲು ದಾಟಿದ್ದು, ಇದು ಇಂಧನ ಕ್ಷೇತ್ರದ ಬದ್ದತೆಯನ್ನು ತೋರಿಸುತ್ತದೆ ಹಾಗೂ ಸ್ವಾವಲಂಬಿ ಭಾರತದ ಸಂಕೇತವಾಗಿದೆ ಎಂದು ಮೋದಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
* ಚೀನಾ 4.362 ಮೆಟ್ರಿಕ್ ಟನ್‌ಗಳೊಂದಿಗೆ ಅಗ್ರಗಣ್ಯ ಕಲ್ಲಿದ್ದಲು ಉತ್ಪಾದಕ ದೇಶವಾಗಿದೆ. ಭಾರತ ಎರಡನೇ ಸ್ಥಾನದಲ್ಲಿದ್ದರೆ, ಅಮೆರಿಕ 781 ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದಿಸುತ್ತದೆ. ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾ ದೇಶಗಳು ಟಾಪ್ ಐದರಲ್ಲಿರುವ ಇತರ ಎರಡು ದೇಶಗಳಾಗಿವೆ.
* ಭಾರತವು 1,000 ಮೆಟ್ರಿಕ್ ಟನ್ (ಒಂದು ಬಿಲಿಯನ್ ಟನ್) ಕಲ್ಲಿದ್ದಲು ಉತ್ಪಾದನೆಯ ಮೈಲಿಗಲ್ಲು ಮುಟ್ಟಿದೆ ಎಂದು ಸಚಿವ ಜಿ. ಕಿಶನ್ ರೆಡ್ಡಿ ಘೋಷಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಜಾಗತಿಕ ವಿದ್ಯುತ್ ಕ್ಷೇತ್ರದಲ್ಲಿ ಭಾರತ ಮುನ್ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಸಾಧನೆಗಾಗಿ ಕಲ್ಲಿದ್ದಲು ವಲಯದ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
* ಭಾರತದಲ್ಲಿ ಶೇ. 75ರಷ್ಟು ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಪ್ರಮುಖ ಶಕ್ತಿ ಮೂಲವಾಗಿದೆ. ಜಾರ್ಖಂಡ್ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಒಡಿಶಾ, ಛತ್ತೀಸ್‌ಗಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲೂ ನಿಕ್ಷೇಪಗಳಿವೆ. ದಕ್ಷಿಣ ಭಾರತದಲ್ಲಿ ಕೇವಲ ತೆಲಂಗಾಣದಲ್ಲೇ ಗಣಿಗಾರಿಕೆ ನಡೆಯುತ್ತದೆ.
ಕಲ್ಲಿದ್ದಲು ಉತ್ಪಾದನೆಯಲ್ಲಿ ಸಾವಿರ ಮೆಟ್ರಿಕ್ ಟನ್ ದಾಟಿದ ಭಾರತ !
Published by Jyoti Angadi
24 ಮಾರ್ಚ್ 2025