* ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯುನೆಸ್ಕೋನ ಪ್ರಿಕ್ಸ್ ವರ್ಸೈಲ್ಸ್ 2023 ಪುರಸ್ಕಾರಕ್ಕೆ ಪಾತ್ರವಾಗಿದೆ.ಟರ್ಮಿನಲ್ 2 (ಟಿ2) 'ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ' ಮತ್ತು ಒಳಾಂಗಣ ವಿನ್ಯಾಸಕ್ಕೆ 2023ರ ವಿಶ್ವದ ವಿಶೇಷ ಪ್ರಶಸ್ತಿ ಲಭ್ಯವಾಗಿದೆ.
* ತೀರ್ಪು ಸಮಿತಿಯಲ್ಲಿ ಖ್ಯಾತ ಫ್ಯಾಷನ್ ಡಿಸೈನರ್ ಎಲಿ ಸಬಾ ನೇತೃತ್ವವಹಿಸಿದ್ದರು. ಫ್ರಿಕ್ಸ್ ವರ್ಸೈಲ್ಸ್ ಸಂಸ್ಥೆಯು ವಿಮಾನ ನಿಲ್ದಾಣದಲ್ಲಿನ ಸಮಕಾಲೀನ ವಾಸ್ತುಶಿಲ್ಪದಲ್ಲಿನ ಅತ್ಯುತ್ತಮ ಸಾಧನೆ ಗುರುತಿಸಿ ಪ್ರಶಸ್ತಿ ಘೋಷಿಸಿದೆ.
* ಈ ಬಗ್ಗೆ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಕೆ.ಮರಾರ್ ಮಾತನಾಡಿ, " 2023ರ ಪ್ರಿಕ್ಸ್ ವಸೈರ್ಲ್ಸ್ ಪ್ರಶಸ್ತಿಗೆ ಟರ್ಮಿನಲ್ 2 ನಾಮ ನಿರ್ದೇಶನವಾಗಿರುವುದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಟರ್ಮಿನಲ್-2 ಅರ್ಹವಾದ ಮನ್ನಣೆ ಪಡೆದಿರುವುದು ಸಂತೋಷವೆನಿಸುತ್ತದೆ. ಟಿ-2, ಕಲೆ ಮತ್ತು ತಂತ್ರಜ್ಞಾನದ ವಿಶಿಷ್ಟ ಮಿಶ್ರಣದೊಂದಿಗೆ, ಒಂದು ವಿಶಿಷ್ಟ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತದೆ. ಇದು ಜಾಗತಿಕ ಪ್ರಯಾಣಿಕರ ಮೇಲೆ ಪ್ರಭಾವ ಬೀರುವುದಲ್ಲದೆ, ನಮ್ಮ ರಾಜ್ಯ ಮತ್ತು ದೇಶದ ಶ್ರೀಮಂತ ಕೊಡುಗೆಗಳನ್ನು ಬಿಂಬಿಸುತ್ತದೆ" ಎಂದರು.
* ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು 2022ರಲ್ಲಿ ಉದ್ಘಾಟನೆ ಮಾಡಲಾಯಿತು. 2,55,661 ಚದರ ಮೀಟರ್ ವಿಸ್ತೀರ್ಣದಲ್ಲಿ, ಟರ್ಮಿನಲ್‌ಅನ್ನು ನಾಲ್ಕು ಅಡಿಪಾಯದ ಕಂಬಗಳ ಮೇಲೆ ನಿರ್ಮಿಸಲಾಗಿದೆ. ತಾಂತ್ರಿಕ ನಾಯಕತ್ವ, ಉದ್ಯಾನದಲ್ಲಿ ಟರ್ಮಿನಲ್, ಪರಿಸರದ ಸುಸ್ಥಿರತೆ, ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಆಚರಣೆಯನ್ನು ಈ ಟರ್ಮಿನಲ್‌ನಲ್ಲಿ ಪ್ರತಿಬಿಂಬಿಸಲಾಗಿದೆ.
* ಟರ್ಮಿನಲ್-2 ಸಂಪೂರ್ಣವಾಗಿ ಸಂಸ್ಕರಿಸಿದ ಬಿದಿರಿನಿಂದ ಅಲಂಕೃತಗೊಂಡಿದ್ದು, ಒಳಾಂಗಣಗಳು ಉತ್ಕೃಷ್ಟ ಲಕ್ಷಣವನ್ನು ನೀಡಲಿದೆ. ಸಂಪೂರ್ಣ ಹಸಿರುಮಯ, ಇಟ್ಟಿಗೆ ಗೋಡೆಗಳು ಹಾಗೂ ಕೃತಕ ಜಲಪಾತದಿಂದ ತುಂಬಿರುವ ಟರ್ಮಿನಲ್, ಒಂದು ವಿಶಾಲವಾದ ಒಳಾಂಗಣ ಉದ್ಯಾನವನ್ನೇ ಹೊಂದಿದೆ. ಹಾಗೆಯೇ ಮೇಲ್ಭಾಗದಲ್ಲಿಗಂಟೆಯೊಳಗಿರುವ ಸಸ್ಯಗಳು ಸಹ ಟರ್ಮಿನಲ್‌ನ ಅನನ್ಯ ಸೌಂದರ್ಯವನ್ನು ಹೆಚ್ಚಿಸುತ್ತದೆ.
* ಟಿ-2ನ ಸುಸ್ಥಿರ ವಿನ್ಯಾಸ, ಆರಂಭದ ಮೊದಲು ಯೂ.ಎಸ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನಿಂದ ನೀಡಲಾದ ಪ್ಲಾಟಿನಂ ಲೀಡ್ ರೇಟಿಂಗ್‌ನೊಂದಿಗೆ ಪೂರ್ವ-ಪ್ರಮಾಣೀಕರಿಸಲಾದ ವಿಶ್ವದ ಅತಿ ದೊಡ್ಡ ಟರ್ಮಿನಲ್ ಆಗಿದೆ. ಇದು ಪರಿಸರದ ಜವಾಬ್ದಾರಿಗೆ ವಿಮಾನ ನಿಲ್ದಾಣದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಹೆಚ್ಚುವರಿಯಾಗಿ, ಇದು ಐಜಿಬಿಸಿ ಗ್ರೀನ್ ನ್ಯೂ ಬಿಲ್ಡಿಂಗ್ ರೇಟಿಂಗ್ ಸಿಸ್ಟಮ್ ಅಡಿಯಲ್ಲಿಪ್ರತಿಷ್ಠಿತ ಪ್ಲಾಟಿನಂ ಪ್ರಮಾಣೀಕರಣವನ್ನು ಸಹಗಳಿಸಿದೆ.
ಶುಕ್ರವಾರ, 22 ಡಿಸೆಂಬರ್ 2023
10:14 ಪೂರ್ವಾಹ್ನ
Daily PDF
ಕೆಂಪೇಗೌಡ ಟರ್ಮಿನಲ್ 2 ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ ಪ್ರಶಸ್ತಿ
Authored by:
Yallamma G