* ಒಡಿಶಾ ರಾಜ್ಯಪಾಲ ರಘುಬರ ದಾಸ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಒಡಿಶಾದ ನೂತನ ರಾಜ್ಯಪಾಲರನ್ನಾಗಿ ಡಾ. ಹರಿಬಾಬು ಕಂಭಂಪತಿ ಅವರನ್ನು ನೇಮಕ ಮಾಡಿದ್ದಾರೆ.
* ಕೇರಳ, ಮಿಜೋರಾಂ, ಮಣಿಪುರಕ್ಕೂ ಹೊಸ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ. ಈ ಮೂಲಕ ರಾಜ್ಯಪಾಲರ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
* ರಾಷ್ಟ್ರಪತಿ ದ್ರೌಪದಿ ಮುರ್ಮು 5 ರಾಜ್ಯಗಳ ರಾಜ್ಯಪಾಲರ ನೇಮಕದಲ್ಲಿ ಮಹತ್ವದ ಬದಲಾವಣೆ ಮಾಡಿದ್ದಾರೆ. ದ್ರೌಪದಿ ಮುರ್ಮು ಇಬ್ಬರು ಹೊಸ ರಾಜ್ಯಪಾಲರನ್ನು ನೇಮಿಸಿದ್ದು, ಇತರ ಮೂವರ ರಾಜ್ಯಗಳ ಬದಲಾವಣೆ ಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
* ಬಿಹಾರ, ಒಡಿಶಾ, ಮಿಜೋರಾಂ, ಕೇರಳ ಮತ್ತು ಮಣಿಪುರ ರಾಜ್ಯಗಳ ರಾಜ್ಯಪಾಲರನ್ನು ರಾಷ್ಟ್ರಪತಿಗಳು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
* ಬಿಹಾರ, ಒಡಿಶಾ, ಮಿಜೋರಾಂ, ಕೇರಳ ಮತ್ತು ಮಣಿಪುರ ರಾಜ್ಯಗಳ ನೂತನ ರಾಜ್ಯಪಾಲರು :
- ಕೇಂದ್ರ ಸರ್ಕಾರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಮಣಿಪುರದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
- ಒಡಿಶಾದ ನೂತನ ರಾಜ್ಯಪಾಲರನ್ನಾಗಿ ಡಾ. ಹರಿಬಾಬು ಕಂಭಂಪತಿ ಅವರನ್ನು ನೇಮಕ ಮಾಡಿದ್ದಾರೆ.
- ಮಿಜೋರಾಂ ಗವರ್ನರ್ ಆಗಿ ಇದೀಗ ವಿಜಯ್ ಕುಮಾರ್ ಸಿಂಗ್ ನೇಮಕಗೊಂಡಿದ್ದಾರೆ.
- ಕೇರಳ ರಾಜ್ಯಪಾಲರಾಗಿ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನೇಮಕವಾಗಿದ್ದಾರೆ.
- ಬಿಹಾರ ರಾಜ್ಯಪಾಲರಾಗಿ ಮೊಹಮ್ಮದ್ ಆರೀಫ್ ಖಾನ್ ನೇಮಕಗೊಂಡಿದ್ದಾರೆ. ಮೊಹಮ್ಮದ್ ಆರೀಫ್ ಖಾನ್ ಇದುವರೆಗೆ ಕೇರಳ ಗವರ್ನರ್ ಆಗಿದ್ದರು.
* 2021ರ ಜುಲೈ 19ರಿಂದ ಡಾ. ಹರಿಬಾಬು ಮಿಜೋರಾಂ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಒಡಿಶಾದ ರಾಜ್ಯಪಾಲರಾಗಿದ್ದಾರೆ.
ಬುಧವಾರ, 25 ಡಿಸೆಂಬರ್ 2024
11:43 ಪೂರ್ವಾಹ್ನ
Daily PDF
ಕೇರಳ, ಮಣಿಪುರ, ಬಿಹಾರ, ಮಿಜೋರಾಂ, ಒಡಿಶಾಕ್ಕೆ ನೂತನ ರಾಜ್ಯಪಾಲರ ನೇಮಕ : ರಾಷ್ಟ್ರಪತಿ ಆದೇಶ
Authored by:
Yallamma G