* ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ₹6.498 ಕೋಟಿಯನ್ನು ಅಕ್ಟೋಬರ್ 10 ರಂದು (ಗುರುವಾರ) ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಹೋಲಿಸಿದರೆ ಬಿಜೆಪಿ ಆಡಳಿತವಿರುವ ಉತ್ತರದ ರಾಜ್ಯಗಳಿಗೆ ಬಿಡುಗಡೆ ಆಗಿರುವ ಮೊತ್ತ ಹೆಚ್ಚು ಇದೆ.
* ಕೇಂದ್ರವು 28 ರಾಜ್ಯಗಳಿಗೆ ಒಟ್ಟು ₹1,78,173 ಕೋಟಿ ಬಿಡುಗಡೆಗೊಳಿಸಿದೆ. ಇದರಲ್ಲಿ ಅಕ್ಟೋಬರ್, 2024 ರಲ್ಲಿ ಬಾಕಿ ಇರುವ ನಿಯಮಿತ ಕಂತಿನ ಜೊತೆಗೆ ₹89,086.50 ಕೋಟಿಗಳ ಒಂದು ಮುಂಗಡ ಕಂತು ಕೂಡ ಸೇರಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ.
* 2024-25ನೇ ಸಾಲಿನಲ್ಲಿ ರಾಜ್ಯಗಳಿಗೆ ತೆರಿಗೆ ಪಾಲಿನ ರೂಪದಲ್ಲಿ ₹12,19,783 ಕೋಟಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ತಿಳಿಸಿದ್ದರು.
* 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ 41ರಷ್ಟನ್ನು ರಾಜ್ಯ ಸರ್ಕಾರಗಳಿಗೆ 14 ಕಂತುಗಳಲ್ಲಿ ಹಂಚಿಕೆ ಮಾಡಬೇಕಾಗುತ್ತದೆ.
- ಉತ್ತರ ಪ್ರದೇಶ ರಾಜ್ಯಕ್ಕೆ ಗರಿಷ್ಠ 31,962 ಕೋಟಿ ರೂಪಾಯಿ ಹಣ
- ಕರ್ನಾಟಕಕ್ಕೆ 6498 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ.
- ಎರಡನೇ ಗರಿಷ್ಠ 17921 ಕೋಟಿ ಹಣವನ್ನು ಬಿಹಾರ ರಾಜ್ಯಕ್ಕೆ ನೀಡಲಾಗಿದೆ.
- ಮಧ್ಯಪ್ರದೇಶಕ್ಕೆ 13,987 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ.
- ಪಶ್ಚಿಮ ಬಂಗಾಳಕ್ಕೆ 13,4040 ಕೋಟಿ ತೆರಿಗೆ ಹಣವನ್ನು ಹಂಚಿಕೆ ಮಾಡಲಾಗಿದೆ.
- ಮಹಾರಾಷ್ಟ್ರಕ್ಕೆ 11255 ಕೋಟಿ,
- ರಾಜಸ್ಥಾನಕ್ಕೆ 10737 ಕೋಟಿ ಹಣ ವಿತರಿಸಲಾಗಿದೆ.
- ಒಡಿಶಾ ರಾಜ್ಯಕ್ಕೆ 8,068 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ.
- ತಮಿಳನಾಡು ರಾಜ್ಯಕ್ಕೆ 7,268 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ.
- ಆಂಧ್ರಪ್ರದೇಶ ರಾಜ್ಯಕ್ಕೆ 7,211 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ.
ಶುಕ್ರವಾರ, 11 ಅಕ್ಟೋಬರ್ 2024
11:45 ಪೂರ್ವಾಹ್ನ
Daily PDF
ಕೇಂದ್ರದ ತೆರಿಗೆ ಪಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ 6,498 ಕೋಟಿ ಬಿಡುಗಡೆ
Authored by:
Bhagya R K