* ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಾಲ ಬರೋಬ್ಬರಿ 130 ಲಕ್ಷ ಕೋಟಿ ರೂ. ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
* 2015-16ರಲ್ಲಿ ಸಾಲ 70.98 ಲಕ್ಷ ಕೋಟಿ ಇದ್ದು, 2025-26ರಲ್ಲಿ ಇದು 200.16 ಲಕ್ಷ ಕೋಟಿಗೆ ಏರಲಿದೆ. ಈ ವರ್ಷ ಸರ್ಕಾರ 4.61 ಲಕ್ಷ ಕೋಟಿ ರೂ. ಮರುಪಾವತಿ ಮಾಡಿದ್ದು, 12.76 ಲಕ್ಷ ಕೋಟಿ ರೂ. ಬಡ್ಡಿ ಪಾವತಿಸಿದೆ.
* ಕೇಂದ್ರ ಜಿಎಸ್‌ಟಿ ಅಧಿಕಾರಿಗಳ ಪ್ರಕಾರ, 2024-25ರಲ್ಲಿ ಕರ್ನಾಟಕದಲ್ಲಿ ಜಿಎಸ್‌ಟಿ ವಂಚನೆ 5 ಪಟ್ಟು ಹೆಚ್ಚಾಗಿದೆ. ಮೂರು ವರ್ಷಗಳಲ್ಲಿ ಒಟ್ಟು 39,577 ಕೋಟಿ ರೂ. ವಂಚನೆ ಪತ್ತೆಯಾಗಿದೆ.
* 2025ನೇ ಹಣಕಾಸು ವರ್ಷದಲ್ಲಿ ದಾಖಲಾಗಿದ್ದ 1,254 ಪ್ರಕರಣಗಳಲ್ಲಿ 9 ಜನರನ್ನು ಬಂಧಿಸಿ, 1,623 ಕೋಟಿ ರೂ. ಸ್ವಯಂಪ್ರೇರಿತವಾಗಿ ಸಂಗ್ರಹಿಸಲಾಗಿದೆ.
* ದೇಶದ ಜಿಎಸ್‌ಟಿ ಸಂಗ್ರಹಣೆ ನಿರಂತರವಾಗಿ ಏರಿಕೆಯಾಗುತ್ತಿದ್ದು, 2024-25ರಲ್ಲಿ 22.08 ಲಕ್ಷ ಕೋಟಿ ರೂ. ದಾಖಲಾಗಿದೆ.
* ಜಿಎಸ್‌ಟಿ ಜಾರಿಗೆ ಬಂದ 8 ವರ್ಷಗಳಲ್ಲಿ ನೋಂದಾಯಿತ ಪಾವತಿದಾರರ ಸಂಖ್ಯೆ 65 ಲಕ್ಷದಿಂದ 1.51 ಕೋಟಿಗೆ ಏರಿದೆ. ಈ ವರ್ಷ ಕಳೆದ ವರ್ಷಕ್ಕಿಂತ 9.4% ಹೆಚ್ಚು ಸಂಗ್ರಹವಾಗಿದೆ.
ಮಂಗಳವಾರ, 19 ಆಗಸ್ಟ್ 2025
11:27 ಪೂರ್ವಾಹ್ನ
Daily PDF
ಕೇಂದ್ರ ಸಾಲ 10 ವರ್ಷದಲ್ಲಿ 130 ಲಕ್ಷ ಕೋಟಿ ಏರಿಕೆ: ನಿರ್ಮಲಾ ಸೀತಾರಾಮನ್
Authored by:
Jyoti Angadi