* ಕೇಂದ್ರ ಸರ್ಕಾರವು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ಥಳೀಯ ಯೋಜನೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧಾರಿತ ಆ್ಯಪ್ "ಗ್ರಾಮ್ ಮನ್ ಚಿತ್ರ ಆ್ಯಪ್" ಗೆ ಚಾಲನೆ ನೀಡಿದೆ.
* ಈ ವಿನೂತನ ಅವಿಷ್ಕಾರಕ ಆ್ಯಪ್, ಭೂ-ಪ್ರಾದೇಶಿಕ (ಜಿಯೋ ಸ್ಪೇಷಲ್) ತಂತ್ರಜ್ಞಾನವನ್ನು ಪಂಚಾಯಿತಿಗಳು ತಮ್ಮ ಯೋಜನೆಗಳನ್ನು ರೂಪಿಸುವಲ್ಲಿ ಹಾಗೂ ಸಬಲೀಕರಿಸಲು ನೆರವಾಗಲಿದೆ.
* 'ಗ್ರಾಮ ಮನ್‌ಚಿತ್ರ' ಏಕೀಕೃತ ಭೂ ಪ್ರಾದೇಶಿಕ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ವಿವಿಧ ಕ್ಷೇತ್ರಗಳಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಸಮಗ್ರ ನೋಟವನ್ನು ಅದು ಒದಗಿಸುತ್ತದೆ.
* ವಾಸ್ತವಿಕ ಮತ್ತು ಸಾಧಿಸಲು ಆಗುವಂಥ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಜಿಐಎಸ್ ತಂತ್ರಜ್ಞಾನ ನೆರವಾಗುವ ರೀತಿಯಲ್ಲಿ 'ಗ್ರಾಮ ಮನ್‌ಚಿತ್ರ' ವಿವಿಧ ಯೋಜನಾ ಸಾಧನಗಳನ್ನು ಸೇರ್ಪಡೆ ಮಾಡಲಿದೆ. ಈ ಸಾಧನಗಳು ಯೋಜನಾ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿವೆ. ಸಂಭಾವ್ಯ ಯೋಜನಾ ಪ್ರದೇಶಗಳನ್ನು ಗುರುತಿಸಲು ನೆರವಾಗಲಿದೆ. ಆಸ್ತಿ ಟ್ರ್ಯಾಕಿಂಗ್, ವೆಚ್ಚ ಅಂದಾಜಿಗೆ ಮತ್ತು ಪರಿಣಾಮ ಮೌಲ್ಯಮಾಪನಕ್ಕೆ ಸಹಾಯಕವಾಗಲಿವೆ.
* ಗ್ರಾಮ ಮನ್‌ಚಿತ್ರಕ್ಕೆ ಪೂರಕವಾಗಿ ಸರ್ಕಾರ 'ಎಂಆ್ಯಕ್ಷನ್‌ಸಾಫ್ಟ್' ಅನ್ನು ಪರಿಚಯಿಸಿದೆ. ಜಿಪಿಎಸ್ ಸಮನ್ವಯಗಳನ್ನು ಒಳಗೂಡಿಸಿಕೊಂಡು ಜಿಯೋ-ಟ್ಯಾಗ್ ಗಳೊಂದಿಗೆ ಫೊಟೋಗಳನ್ನು ಸೆರೆಹಿಡಿಯಲು ರೂಪಿಸಲಾದ ಮೊಬೈಲ್ ಆಧಾರಿತ ವಿನ್ಯಾಸ ಇದಾಗಿದೆ.
* ಮೂರು ನಿರ್ಣಾಯಕ ಹಂತಗಳಲ್ಲಿ ಆಸ್ತಿಗಳ ಜಿಯೋ-ಟ್ಯಾಗಿಂಗ್‌ಗೆ ಈ ಫೀಚರ್ ನೆರವಾಗುತ್ತದೆ.
1. ಕೆಲಸ ಆರಂಭಕ್ಕೆ ಮುನ್ನ.
2. ಕಾಮಗಾರಿಯ ಅವಧಿಯಲ್ಲಿ. ಮತ್ತು
3. ಕೆಲಸ ಪೂರ್ಣಗೊಂಡ ಮೇಲೆ
* ಎಂಆ್ಯಕ್ಷನ್‌ಸಾಫ್ಟ್ ಅಪ್ಲಿಕೇಶನ್ ಬಳಸಿ ಜಿಯೋ-ಟ್ಯಾಗ್ ಮಾಡಲಾದ ಆಸ್ತಿಗಳು 'ಗ್ರಾಮ ಮನ್ ಚಿತ್ರ'ದೊಂದಿಗೆ ನಿರಾಯಾಸವಾಗಿ ಸಮಗ್ರಗೊಳ್ಳುತ್ತವೆ. ಇದರಿಂದಾಗಿ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಕಾರ್ಯಗಳ ಮನೋಗೋಚರೀಕರಣವು (ವಿಜುವಲೈಸೇಶನ್) ಸುಧಾರಿಸುತ್ತದೆ. ಇದರಿಂದ ಹಣಕಾಸು ಆಯೋಗದ ನಿಧಿಯ ಅಡಿಯಲ್ಲಿ ಬರುವ ಆಸ್ತಿಗಳ ಮಾಹಿತಿ ಹಾಗೂ ಲಭ್ಯತೆಯ ಪಾರದರ್ಶಕತೆ ಸಾಧ್ಯವಾಗುತ್ತದೆ.
ಗುರುವಾರ, 18 ಜನವರಿ 2024
5:24 ಅಪರಾಹ್ನ
Daily PDF
ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದಿಂದ "ಗ್ರಾಮ್ ಮನ್ ಚಿತ್ರ ಆ್ಯಪ್" ಗೆ ಚಾಲನೆ
Authored by:
Yallamma G