* ಕೇಂದ್ರ ಕ್ಯಾಬಿನೆಟ್ (ಕೇಂದ್ರ ಸಚಿವ ಸಂಪುಟದಿಂದ) ಪರಿಸರ ಸ್ನೇಹಿ ಬಸ್ ಗಳ ಸಂಚಾರ ಪ್ರತ್ಸಾಹಿಸುವ 'PM-eBus ಸೇವಾ' ಯೋಜನೆಗೆ ಆಗಸ್ಟ್ 16 ರಂದು ಅನುಮೋದನೆ ನೀಡಿದೆ.
* ಭಾರತದಲ್ಲಿ ಒಟ್ಟು 169 ನಗರಗಳಿದ್ದು ಅದರಲ್ಲಿ100 ನಗರಗಳನ್ನು ಶಾರ್ಟ್‌ಲಿಸ್ಟ್ ಮಾಡುವಮೂಲಕ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ದೇಶಾದ್ಯಂತ 10000 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ತಿಳಿಸಿದರು.
* PM-eBus ಸೇವಾ ಯೋಜನೆಗೆ 57,613 ಕೋಟಿ ರೂ ಗಳಲ್ಲಿ 20,000 ಕೋಟಿ ರೂಗಳನ್ನು ಕೇಂದ್ರ ಸರ್ಕಾರ ನೀಡಲಿದೆ, ಮತ್ತು ಈ ಯೋಜನೆಯು ಸಂಪರ್ಕವನ್ನು ಸುಧಾರಿಸಲು ಹಾಗೂ ಹಸಿರು ಚಲನಶೀಲತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂಬುವುದಾಗಿ ಸಚಿವರು ಮಾಹಿತಿ ನೀಡಿದರು.
* PM-eBus ಸೇವಾ ಯೋಜನೆಯು 3 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನಗರಗಳನ್ನು ಒಳಗೊಂಡಿದ್ದು, ಈಶಾನ್ಯ ಪ್ರದೇಶದ ಎಲ್ಲಾ ರಾಜಧಾನಿ ನಗರಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಗುಡ್ಡಗಾಡು ರಾಜ್ಯಗಳನ್ನು ಸೇರಿಸಲಾಗುವುದು. ಮತ್ತು ಪ್ರಯಾಣಿಕರಿಗೆ ರಾಷ್ಟ್ರೀಯ ಹಸಿರು ಚಲನಶೀಲ ಕಾರ್ಡ್‌ಗಳನ್ನು ಒದಗಿಸಲಾಗುವುದು.
* ಈ ಯೋಜನೆಯಡಿಯಲ್ಲಿ45,000 ರಿಂದ 55,000 ನೇರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Test Your Knowledge!
Attempt daily current affairs quizzes to boost your exam readiness.
Stay Updated with KPSC Vaani
Get instant notifications for exam alerts, question papers, syllabus, and results directly on your phone.