* ಪುಣೆಯ ಬಾಲಗಂಧರ್ವ ಸಂಗೀತ ರಸಿಕ ಮಂಡಳಿ ಕೊಡಮಾಡುವ ಪ್ರತಿಷ್ಠಿತ ‘ಕೊಹಿನೂರ್ ಗಂಧರ್ವ’ ಪ್ರಶಸ್ತಿಗೆ ಧಾರವಾಡದ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಕೈವಲ್ಯ ಕುಮಾರ್ ಗುರವ ಆಯ್ಕೆಯಾಗಿದ್ದಾರೆ.
* ಸಂಗೀತ ಮತ್ತು ನಾಟಕ ಕಲೆಯಲ್ಲಿ ಅಪೂರ್ವ ಸಾಧನೆ ಮಾಡಿದ ಕಲಾವಿದರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
* ಈ ಪುಣೆಯ ಮರಾಠಿ ಗಾಯಕ, ರಂಗ ನಟ, ಬಾಲ ಗಂಧರ್ವರ ಸ್ಮರಣೆಯಲ್ಲಿ 50 ವರ್ಷಗಳಿಂದ ಪ್ರಶಸ್ತಿ ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ಹೊರಗಿನ ಕಲಾವಿದರಿಗೆ ಪ್ರಶಸ್ತಿ ಘೋಷಿಸಲಾಗಿದೆ.
* ಈ ಪ್ರಶಸ್ತಿಯು ₹ 1,11,111 ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
* ಮಂಡಳಿಯು ವಿದುಷಿ ಮಂಜೂಷಾ ಕುಲಕರ್ಣಿ ಪಾಟೀಲ ಅವರಿಗೆ ‘ಬಾಲಗಂಧರ್ವ ಗುಣಗೌರವ’ ಪುರಸ್ಕಾರವನ್ನೂ ಪ್ರಕಟಿಸಿದೆ. ಜುಲೈ 15ರಂದು ಪುಣೆಯ ಬಾಲಗಂಧರ್ವ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕೈವಲ್ಯ ಕುಮಾರ್ ಗುರವಗೆ ‘ಕೊಹಿನೂರ್ ಗಂಧರ್ವ’ ಪ್ರಶಸ್ತಿ
Published by Jyoti Angadi
14 ಜುಲೈ 2025