* ಪುರುಷರ ಜೂನಿಯರ್ ಹಾಕಿ ವಿಶ್ವಕಪ್ 2025ರ ಸೆಮಿಫೈನಲ್‌ನಲ್ಲಿ ಆತಿಥೇಯ ಭಾರತ ತಂಡ ಜರ್ಮನಿಯಿಂದ 5–1 ಅಂತರದ ಭಾರೀ ಸೋಲು ಕಂಡು ಚಾಂಪಿಯನ್ ಆಗುವ ಕನಸಿಗೆ ತೆರೆಬಿದ್ದಿತು. ಸೆಮಿಫೈನಲ್ ಸೋಲಿನ ಬಳಿಕ, ಭಾರತ ಬುಧವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಅದ್ಭುತ ಹೋರಾಟ ನಡೆಸಿ ಅರ್ಜೆಂಟೀನಾವನ್ನು 4–2ರಿಂದ ಸೋಲಿಸಿ ಮೂರನೇ ಸ್ಥಾನವನ್ನು ಕಾಪಾಡಿಕೊಂಡಿತು. ಎರಡು ಗೋಲುಗಳ ಹಿನ್ನಡೆಯಿಂದ ಭರ್ಜರಿ ಕಮ್‌ಬ್ಯಾಕ್ ನೀಡಿದ ಭಾರತ ಯುವ ತಂಡ ಪ್ರಶಂಸನೀಯ ಆಟ ತೋರಿ ಪುರುಷರ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿತು.
* ಅಂತಿಮವಾಗಿ, ಜರ್ಮನಿ ಮತ್ತು ಸ್ಪೇನ್ ನಡುವಿನ ರೋಚಕ ಫೈನಲ್ ಪಂದ್ಯ ನಿಗದಿತ ಅವಧಿಯಲ್ಲಿ 1–1 ಸಮಬಲ ಸಾಧಿಸಿದ ನಂತರ ಪೆನಾಲ್ಟಿ ಶೂಟೌಟ್‌ಗೆ ಸಾಗಿತು. ಶೂಟೌಟ್‌ನಲ್ಲಿ 3–2ರಿಂದ ಗೆಲುವು ದಾಖಲಿಸಿ ಜರ್ಮನಿ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಕಳೆದ ಬಾರಿಯೂ ಚಾಂಪಿಯನ್ ಆಗಿದ್ದಜರ್ಮನಿ ಹತ್ತನೇ ಬಾರಿ ಫೈನಲ್ ಆಡಿದ್ದು, ಎಂಟನೇ ಬಾರಿ ಚಾಂಪಿಯನ್ ಆಗಿದೆ.
* ಜರ್ಮನಿಯ ಪ್ರಾಬಲ್ಯ ಮತ್ತು ಭಾರತದ ಜಿಜ್ಞಾಸೆ ತುಂಬಿದ ಹೋರಾಟ ಈ ಟೂರ್ನಿಯ ಪ್ರಮುಖ ಆಕರ್ಷಣೆಗಳಾಗಿ ಉಳಿದವು.
ಜೂನಿಯರ್ ಹಾಕಿ ವಿಶ್ವಕಪ್ 2025: ಜರ್ಮನಿ ಮರು ಚಾಂಪಿಯನ್; ಭಾರತಕ್ಕೆ ಕಂಚಿನ ಪದಕ
Published by Akshata Halli
11 ಡಿಸೆಂಬರ್ 2025