* ಕೇರಳಕ್ಕೆ ಮಾನ್ಸೂನ್‌ನ ಆಗಮನವಾಗಲಿದ್ದು, ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ಜೂನ್ ಮೊದಲ ವಾರದಲ್ಲಿ ಮೇ 31 ಅಥವಾ ಜೂನ್ 1ಕ್ಕೆ ಕೇರಳ ರಾಜ್ಯಕ್ಕೆ ಮುಂಗಾರು ಮಳೆ ಆಗಮನ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಕೇಂದ್ರ ತಿಳಿಸಿದೆ.
* ಮುಂದಿನ ಐದು ದಿನಗಳು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಪ್ರವೇಶಿಸುವ ಸಾಧ್ಯತೆ ಇದೆ. ಜೂನ್ 5 ರಂದು ಬೆಂಗಳೂರು ಹವಾಮಾನ ಇಲಾಖೆ ಕೇಂದ್ರ ತಿಳಿಸಿದೆ.
* ಮೇ 27 ರ ಹವಾಮಾನ ಇಲಾಖೆಯ ವರದಿಯ ಪ್ರಕಾರ ಯಾದಗಿರಿಯ ನಾರಾಯಣಪುರ, ಇಳಕಲ್, ಕೆಂಭಾವಿಯಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಉಳಿದಂತೆ ತಾವರಗೇರ, ಸುರಪುರ ಹಾಗೂ ತಾಳಿಕೋಟೆಯಲ್ಲಿ ತಲಾ 4, ಬೇವೂರು, ಕಕ್ಕೇರಿ, ಕುಷ್ಟಗಿಯಲ್ಲಿ ತಲಾ 3, ಲಿಂಗಸುಗೂರು, ಗಂಗಾವತಿ, ವಿಜಯಪುರ, ರಾಯಚೂರು, ರಾಯಚೂರಿನ ಜಾಲಹಳ್ಳಿ, ಮುನಿರಾಬಾದ್, ದೇವದುರ್ಗ, ಗಬ್ಬೂರು, ಯಲಬುರ್ಗಾದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.
* ಉಳಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ 41.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
* ಮೇ 31 (ಶುಕ್ರವಾರ) ರಂದು ಕೇರಳಕ್ಕೆ ಮಾನ್ಸೂನ್ ಆಗಮವಾಗಲಿದೆ ನಂತರ ರಾಜ್ಯವನ್ನು ಪ್ರವೇಶವಾಗಲು ಒಂದು ವಾರ ಬೇಕು. ಭಾರತೀಯ ಹವಾಮಾನ ಇಲಾಖೆಯ (ಬೆಂಗಳೂರು) ವಿಜ್ಞಾನಿ ಮತ್ತು ನಿರ್ದೇಶಕ ಸಿ.ಎಸ್.ಪಾಟೀಲ್ ಅವರು ತಿಳಿಸಿದ್ದಾರೆ.
* ನೈಋತ್ಯ ಮಾನ್ಸೂನ್ ಕುರಿತು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂತಿಮ ವರದಿಯನ್ನು ಬಿಡುಗಡೆ ಮಾಡಿದ್ದು, ಜೂನ್ ನಿಂದ ಮತ್ತು ಸೆಪ್ಟೆಂಬರ್‌ವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಕರ್ನಾಟಕದಲ್ಲಿಯೂ ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆ ಸುರಿಯಲಿದೆ ಎಂದು ಐಎಂಡಿ ತಿಳಿಸಿದ್ದಾರೆ.
ಬುಧವಾರ, 29 ಮೇ 2024
11:39 ಪೂರ್ವಾಹ್ನ
Daily PDF
ಜೂನ್ 5 ರಂದು ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ
Authored by:
Bhagya R K