* ಭಾರತೀಯ ಪರ್ವತಾರೋಹಿ ಸತ್ಯದೀಪ್ ಗುಪ್ತಾ ಅವರು ಒಂದು ಋತುಮಾನದಲ್ಲಿ ಎರಡು ಬಾರಿಗೆ ಮೌಂಟ್ ಎವರೆಸ್ಟ್ ಮತ್ತು ಮೌಂಟ್ ಲೋಟ್ಸೆ ಎಂಬ ಎರಡು ಪರ್ವತಗಳನ್ನು ಏರುವ ಮೂಲಕ ಇತಿಹಾಸ ಸೃಷ್ಟಿಸಿದ ಮೊದಲ ಭಾರತೀಯ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
* ಪಯೋನಿಯರ್ ಅಡ್ವೆಂಚರ್ ಎಕ್ಸ್‌ಪೆಡಿಶನ್ ಸಂಸ್ಥೆಯ ಪ್ರಕಾರ ಗುಪ್ತಾ ಅವರು ಮೇ 27. 2024 (ಸೋಮವಾರ) ರಂದು ಮಧ್ಯಾಹ್ನ 8,516-ಮೀಟರ್ ಎತ್ತರದ ಮೌಂಟ್ ಲೊಟ್ಸೆ ಪರ್ವತವನ್ನು ಏರಿದ್ದಾರೆ ಮತ್ತು 8,849-ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತವನ್ನು ಅದೇ ಮಧ್ಯರಾತ್ರಿ 12:45 ಕ್ಕೆ ಏರಿದರು.
* ಗುಪ್ತಾ ಅವರು ಮೌಂಟ್ ಎವರೆಸ್ಟ್‌ನಿಂದ ಮೌಂಟ್ ಲೊಟ್ಸೆಗೆ 11 ಗಂಟೆ 15 ನಿಮಿಷಗಳಲ್ಲಿ ಕ್ರಮಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಸ್ಥಾಪಿಸಿದರು.
* ಗುಪ್ತಾ ಅವರು ಈ ಹಿಂದೆ ಮೇ 21 (ಮಂಗಳವಾರ) ರಂದು ಮೌಂಟ್ ಎವರೆಸ್ಟ್ ಮತ್ತು ಮೇ 22 (ಬುಧವಾರ) ರಂದು ಮೌಂಟ್ ಲೋಟ್ಸೆ ಎಂಬ ಎರೆಡು ಪರ್ವತವನ್ನು ಏರಿದ್ದಾರೆ. ಮೊದಲ ಪರ್ವತಾರೋಹಿ ಕೂಡಾ ಹೆಗ್ಗಳಿಕೆ ಪಡೆದಿದ್ದಾರೆ.
ಭಾರತೀಯ ಪರ್ವತಾರೋಹಿ ಸತ್ಯದೀಪ್ ಎರಡು ಬಾರಿ ಪರ್ವತಾರೋಹಣ ಸಾಧಿಸುವ ಮೂಲಕ ದಾಖಲೆ
Published by Bhagya R K
29 ಮೇ 2024