* ಪ್ರತಿ ವರ್ಷ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನ ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಹೆಪಟೈಟಿಸ್ ರೋಗದ ಬಗ್ಗೆ ಜನರಲ್ಲಿ ವಿಶೇಷ ಜಾಗೃತಿ ಮತ್ತು ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
* 2023 ಜುಲೈ 28 ವಿಶ್ವ ಹೆಪಟೈಟಿಸ್ ದಿನದ ಥೀಮ್ : ನಾವು ಕಾಯುತ್ತಿಲ್ಲ (we're not waiting).
* ಹೆಪಟೈಟಿಸ್‌ನ ನಿರ್ಮೂಲನಾ ಪ್ರಯತ್ನಗಳನ್ನು ವೇಗಗೊಳಿಸುವುದು ಮತ್ತು ಹೆಪಟೈಟಿಸ್ ಇರುವವರಿಗೆ ಪರೀಕ್ಷೆ ಹಾಗೂ ತುರ್ತು ಚಿಕಿತ್ಸೆಗೆ ಅವಕಾಶ ಒದಗಿಸುವುದು ಈ ಧೈಯವಾಕ್ಯದ ಗುರಿಯಾಗಿದೆ.
* 2010ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಹೆಪಟೈಟಿಸ್ ದಿನ ಆಚರಣೆಯನ್ನು ಅಂಗೀಕರಿಸಿತು. ಜುಲೈ 28 ಹೆಪಟೈಟಿಸ್ ವೈರಸ್ ಕಂಡು ಹಿಡಿದ ಮತ್ತು ಹೆಪಟೈಟಿಸ್ ರೋಗಕ್ಕೆ ಲಸಿಕೆ ಕಂಡುಹಿಡಿದ ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಬರೂಚ ಸಾಮ್ಯುಯಲ್ ಬ್ಲೂಮ್‌ಬರ್ಗ್ ಅವರ ಜನ್ಮದಿನವಾಗಿದೆ, ಅವರ ಗೌರವಾರ್ಥ ಜುಲೈ 28 ಅನ್ನು ವಿಶ್ವ ಹೆಪಟೈಟಿಸ್ ದಿನವಾಗಿ ಆಚರಿಸಲಾಗುತ್ತದೆ.
ಶುಕ್ರವಾರ, 28 ಜುಲೈ 2023
10:27 ಪೂರ್ವಾಹ್ನ
Daily PDF
ಜುಲೈ 28 ವಿಶ್ವ ಹೆಪಟೈಟಿಸ್ ದಿನ
Authored by:
Akshata Halli