* ಭಾರತದ ರಮಣೀಯ ಭೂದೃಶ್ಯಗಳನ್ನು ಗೌರವಿಸಲು ಮತ್ತು ದೇಶದ ಆರ್ಥಿಕತೆಗೆ ಪ್ರವಾಸೋದ್ಯಮದ ಮೌಲ್ಯದ ಬಗ್ಗೆ ಸಾರ್ವಜನಿಕ ತಿಳುವಳಿಕೆಯನ್ನು ಹೆಚ್ಚಿಸಲು ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಮೊದಲ ಬಾರಿಗೆ 1948 ರಲ್ಲಿ ಆಚರಿಸಲಾಯಿತು.
* 2024 ರ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಥೀಮ್ 'ಸಸ್ಟೈನಬಲ್ ಜರ್ನೀಸ್, ಟೈಮ್‌ಲೆಸ್ ಮೆಮೊರೀಸ್,' ಜವಾಬ್ದಾರಿಯುತ ಮತ್ತು ಜಾಗರೂಕ ಪ್ರಯಾಣವನ್ನು ಉತ್ತೇಜಿಸುತ್ತದೆ.
* ಭಾರತೀಯ ಪ್ರವಾಸೋದ್ಯಮವು ವಿಹಾರ, ವ್ಯಾಪಾರ, ಕ್ರೀಡೆ, ಗ್ರಾಮೀಣ, ಶೈಕ್ಷಣಿಕ ಮತ್ತು ವೈದ್ಯಕೀಯ ಪ್ರಯಾಣದಂತಹ ವ್ಯಾಪಕ ಶ್ರೇಣಿಯ ಪ್ರಯಾಣದ ಅನುಭವಗಳನ್ನು ನೀಡುತ್ತದೆ.
* ಭಾರತದ ವೈವಿಧ್ಯತೆಯು ಇದನ್ನು ಜನಪ್ರಿಯ ಪ್ರವಾಸಿ ತಾಣವನ್ನಾಗಿ ಮಾಡುತ್ತದೆ. ಪ್ರವಾಸ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಅನೇಕರನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ
* ನಮ್ಮ ದೇಶದ ಪ್ರವಾಸೋದ್ಯಮವನ್ನು ಕಣ್ತುಂಬಿಕೊಳ್ಳಲು ಅನೇಕ ದೂರದ ದೇಶಗಳಿಂದ ಸಂದರ್ಶಕರು ಭೇಟಿ ನೀಡುತ್ತಾರೆ. ಇಲ್ಲಿನ ರಮಣೀಯ ಭೂದೃಶ್ಯ, ಆಹ್ಲಾದಕರವಾದ ಗಿರಿಧಾಮಗಳು, ಎತ್ತರವಾದ ಬೆಟ್ಟಗಳು, ಪ್ರಶಾಂತವಾಗಿ ಹರಿಯುವ ನದಿ, ಸರೋವರ, ಜಲಪಾತಗಳು, ಘರ್ಜಿಸುವ ಸಮುದ್ರತೀರದ ಅಲೆಗಳು ಎಂತವರನ್ನು ಮರಳುಗಳಿಸುತ್ತದೆ.
ಶನಿವಾರ, 27 ಜನವರಿ 2024
4:22 ಅಪರಾಹ್ನ
Daily PDF
ಜನವರಿ 25 : ರಾಷ್ಟ್ರೀಯ ಪ್ರವಾಸೋದ್ಯಮ ದಿನ
Authored by:
Yallamma G