* ಭಾರತದ ಆರ್ಥಿಕ ಬೆಳವಣಿಗೆ ದರವು 2024-25ನೇ ಆರ್ಥಿಕ ವರ್ಷದಲ್ಲಿ ಭಾರಿ ಕುಸಿಯುವ ಸಾಧ್ಯತೆಯಿದೆ ಎಂದು ರಾಷ್ಟೀಯ ಸಾಂಖಿಕ ಕಚೇರಿ(NSO) ಅಂದಾಜಿಸಿದೆ.
* ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಬೆಳವಣಿಗೆಯು ನಾಲ್ಕು ವರ್ಷಗಳ ಕನಿಷ್ಠ ಮಟ್ಟವಾದ ಶೇ.6.4ಕ್ಕೆ ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ.
* ಮುಖ್ಯವಾಗಿ ಉತ್ಪಾದನೆ ಮತ್ತು ಸೇವಾ ವಲಯದ ಕಳಪೆ ಪ್ರದರ್ಶನ ಈ ಕುಸಿತಕ್ಕೆ ಕಾರಣ ಎಂದು ಮಂಗಳವಾರ(ಜನವರಿ 7) ಬಿಡುಗಡೆಯಾದ ಮೊದಲ ಅಂದಾಜು ವರದಿ ತಿಳಿಸಿವೆ.
* ಇದು ಕೋವಿಡ್ ವರ್ಷ(2020-21)ದಲ್ಲಿ ದಾಖಲಾದ ಶೇಕಡಾ 5.8ರಷ್ಟು ಋಣಾತ್ಮಕ ಬೆಳವಣಿಗೆಗಿಂತ ಕಡಿಮೆಯಾಗಿದೆ.
* ಜಿಡಿಪಿ ಬೆಳವಣಿಗೆಯು 2021-22ರಲ್ಲಿ ಶೇ. 9.7ರಷ್ಟು, 2022-23ರಲ್ಲಿ ಶೇ.7ರಷ್ಟು ಮತ್ತು 2023-2024ರಲ್ಲಿ ಕೊನೆಗೊಂಡ ಕೊನೆಯ ಹಣಕಾಸು ವರ್ಷದಲ್ಲಿ ಶೇ. 8.2 ರಷ್ಟು ದಾಖಲಾಗಿದೆ.
* 2024-25 ಭಾರತೀಯ ರಿಸರ್ವ್ ಬ್ಯಾಂಕ್(RBI) ಪ್ರಸ್ತಕ ಆರ್ಥಿಕ ವರ್ಷದ ಜಿಡಿಪಿಯನ್ನು ಶೇ. 7.2 ರಿಂದ ಶೇ. 6.6ಕ್ಕೆ ಇಳಿಕೆಯಾಗಲಿದೆ ಎಂದು ಕಳೆದ ತಿಂಗಳು ಡಿಸೆಂಬರ್ ನಲ್ಲಿ ಅಂದಾಜಿಸಿದೆ.
* ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 01ರಂದು 2025-26 ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಸಿದ್ಧಪಡಿಸುವಿಕೆಗೆ ಈ ಅಂದಾಜನ್ನು ಬಳಸಿಕೊಳ್ಳಲಾಗುತ್ತದೆ.
* ಜಿಡಿಪಿ ನಿರೀಕ್ಷೆಗಿಂತ ಕಡಿಮೆ ದಾಖಲೆಯಾಗುವ ಸಾಧ್ಯತೆಯಿದ್ದು, ಲೋಕಸಭೆ ಚುನಾವಣೆ ಫಲಿತಾಂಶದ ಅನಿಶ್ಚಿತತೆ, ನಿರೀಕ್ಷೆಗೂ ಮೀರಿ ಸುರಿದ ಮಳೆ ಹಾಗೂ ಜಾಗತಿಕ ಬಿಕ್ಕಟ್ಟು ಇದಕ್ಕೆ ಕಾರಣವಾಗಿದೆ. ಇದು ದೇಶಿಯ ಬೇಡಿಕೆ ಮತ್ತು ರಫ್ತು ಚಟುವಟಿಕೆ ಮೇಲೂ ಪರಿಣಾಮ ಬೀರಿದೆ ಎಂದು ಡೆಲಾಯ್ಟ್ ಇಂಡಿಯಾದ ಅರ್ಥಶಾಸ್ತ್ರಜ್ಞೆ ರುಮ್ಕಿ ಮಜುಂದಾರ್ ಅವರು ಹೇಳಿದ್ದರು.
ಜಿಡಿಪಿ ಬೆಳವಣಿಗೆ ದರ ಶೇಕಡಾ 6.4ಕ್ಕೆ ಇಳಿಕೆ ಸಾಧ್ಯತೆ
Published by Jyoti Angadi
08 ಜನವರಿ 2025