* ಪ್ರಸ್ತುತ ದಕ್ಷಿಣ ಕೊರಿಯಾದ ಜನಸಂಖ್ಯೆ 5 ಕೋಟಿಯಷ್ಟಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ 2100ರ ವೇಳೆಗೆ ದೇಶದ ಜನಸಂಖ್ಯೆ 2 ಕೋಟಿಗೆ ಕುಸಿಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
* ದಕ್ಷಿಣ ಕೊರಿಯಾದಲ್ಲಿ ಹುಟ್ಟುತ್ತಿರುವ ಮಕ್ಕಳ ಪ್ರಮಾಣ ಶೇ.0.6ಕ್ಕೆ ಕುಸಿತ ಕಂಡಿದೆ. ದಕ್ಷಿಣ ಕೊರಿಯಾ ಜಗತ್ತಿನಲ್ಲೇ ಅತ್ಯಂತ ಕನಿಷ್ಠ ಫಲವತ್ತತೆಯ ಪ್ರಮಾಣವನ್ನು ಹೊಂದಿದೆ. 2023ರಲ್ಲಿ ಇದರ ಪ್ರಮಾಣ ಶೇ.8ರಷ್ಟು ಕುಸಿತ ಕಂಡಿದೆ.
* 1960ರ ದಶಕದಲ್ಲಿ ಆರಂಭವಾದ ಕುಟುಂಬ ಯೋಜನಾ ನೀತಿಯೇ ಇದಕ್ಕೆಲ್ಲಾ ಪ್ರಮುಖ ಕಾರಣವಾಗಿದೆ. ಜನನ ಪ್ರಮಾಣ ಕಡಿಮೆ ಮಾಡಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಯಿತು. ಆ ಸಮಯದಲ್ಲಿ ದಕ್ಷಿಣ ಕೊರಿಯಾದ ತಲಾ ಆದಾಯವು ಜಾಗತಿಕ ಸರಾಸರಿಯ ಕೇವಲ 20 ಪ್ರತಿಶತದಷ್ಟಿತ್ತು. ಫಲವತ್ತತೆಯ ದರವು ಪ್ರತಿ ಒಬ್ಬ ಮಹಿಳೆ 6ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುತ್ತಿದ್ದರು.
* 1982 ರ ಹೊತ್ತಿಗೆ, ಆರ್ಥಿಕ ಬೆಳವಣಿಗೆಯೊಂದಿಗೆ, ಫಲವತ್ತತೆಯ ದರವು 2.4 ಕ್ಕೆ ಇಳಿಯಿತು.
* 1983ರಿಂದ ಫಲವತ್ತತೆ ದರ ನಿಯಂತ್ರಣದಲ್ಲಿತ್ತು, ಅಂದಿನಿಂದ ಕಡಿಮೆಯಾಗಿರಲಿಲ್ಲ. ದಕ್ಷಿಣ ಕೊರಿಯಾವು ತನ್ನ ಜನಸಂಖ್ಯೆಯ ಶೇ.70ರಷ್ಟು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. * ಕೇವಲ 14 ಮಿಲಿಯನ್ ಜನರು ಮಾತ್ರ ದೇಶದಲ್ಲಿರುತ್ತಾರೆ, ಇದು ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಆತಂಕಕಾರಿ ಪರಿಸ್ಥಿತಿ ಎಂದು ಕೆಲವು ವಿಶ್ಲೇಷಕರು ಹೇಳಿದ್ದಾರೆ.
* ದಕ್ಷಿಣ ಕೊರಿಯಾದಲ್ಲಿ ಯುವಕರ ಸಂಖ್ಯೆಗಿಂತ ವಯಸ್ಸಾದವರ ಸಂಖ್ಯೆ ಹೆಚ್ಚಾಗುತ್ತಿದೆ.ಈಗಾಗಲೇ ದೇಶದಲ್ಲಿ 60 ವರ್ಷ ಮೀರಿದವರ ಸಂಖ್ಯೆ 1 ಕೋಟಿಗೂ ಅಧಿಕವಾಗಿದೆ.
* ಯುವಕರಸಂಖ್ಯೆ ಬಾರಿ ಪ್ರಮಾಣದಲ್ಲಿ ಕುಸಿದಿದ್ದು, ವಯಸ್ಸಾದವರ ಸಂಖ್ಯೆ ಹೆಚ್ಚಾತ್ತಿದೆ. ಇದು ದೇಶದ ಆರ್ಥಿಕತೆಗೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ.
* ಪ್ರಸ್ತುತ ಫಲವತ್ತತೆ ಹೆಚ್ಚಿನ ಜನಸಂಖ್ಯೆಯನ್ನು ಭಾರತ ಹೊಂದಿದ್ದರೂ ಭಾರತದಲ್ಲಿ ಮಕ್ಕಳ ಜನನ ಪ್ರಮಾಣ ನಿಧಾನಕ್ಕೆ ಕುಸಿತದ ಹಾದಿ ಹಿಡಿದಿದೆ. 1990ರ ದಶಕದಲ್ಲಿ ಭಾರತದ ಫಲವತ್ತತೆ ದರ ಶೇ.3.4ರಷ್ಟಿತ್ತು. ಬಳಿಕ ಇದು ಕುಸಿತದಲ್ಲೇ ಮುಂದುವರಿದಿದೆ. 2020ರ ದಶಕದಲ್ಲಿ ಇದರ ಪ್ರಮಾಣ ಶೇ.2ಕ್ಕೆ ಕುಸಿದಿದೆ.
ಶನಿವಾರ, 07 ಡಿಸೆಂಬರ್ 2024
3:13 ಅಪರಾಹ್ನ
Daily PDF
ಜಗತ್ತಿನಲ್ಲೇ ಅತ್ಯಂತ ಕನಿಷ್ಠ ಫಲವತ್ತತೆಯ ಪ್ರಮಾಣವನ್ನು ಹೊಂದಿದ ದಕ್ಷಿಣ ಕೊರಿಯಾ
Authored by:
Jyoti Angadi