* ಗುವಾಹಟಿ ಐಐಟಿಯಲ್ಲಿ ನಡೆದ 10 ನೇ ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವ (IISF) ನವೆಂಬರ್ 30 ರಿಂದ ಪ್ರಾರಂಭವಾಗಿ ಡಿಸೆಂಬರ್ 4, 2024 ರಂದು ಮುಕ್ತಾಯವಾಯಿತು.
* ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್ ಡಿಸಿಪ್ಲಿನರಿ ಸೈನ್ಸ್ ಆ್ಯಂಡ್ ಟೆಕ್ನಾಲಜಿ (ಸಿಎಸ್‌ಐಆರ್-ಎನ್ ಐಐಎಸ್‌ಟಿ) ಕಾರ್ಯಕ್ರಮವನ್ನು ನಿರ್ವಹಿಸಿದವು.
* 'ಭಾರತವನ್ನು ವಿಜ್ಞಾನ-ತಂತ್ರಜ್ಞಾನ ಆಧರಿತ ಉತ್ಪಾದನಾ ಕೇಂದ್ರವನ್ನಾಗಿ ರೂಪಾಂತರಿ '(Transforming India into an S&T-driven Global Manufacturing Hub) ಎಂಬ ಧೈಯದೊಂದಿಗೆ ಆಯೋಜಿಸಲಾಗಿತ್ತು.
* 4 ದಿನಗಳ ಮೆಗಾ ವಿಜ್ಞಾನ ಉತ್ಸವವು 24 ವಿಭಿನ್ನ ಕಾರ್ಯಕ್ರಮಗಳನ್ನು ಒಳಗೊಂಡಿತ್ತು, ಇದರಲ್ಲಿ 7000 ಪ್ರತಿನಿಧಿಗಳು ಮತ್ತು 45000 ಜನರು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
* ಐಐಟಿ ಗುವಾಹಟಿಯಲ್ಲಿ ಚಂದ್ರನ ದೈತ್ಯ 10-ಮೀಟರ್ ಎತ್ತರದ 'ನೈಜ ಮೇಲ್ಮೈ ಪ್ರತಿರೂಪವಾಗಿದ್ದು, ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಪ್ರಗತಿಯನ್ನು ಪ್ರದರ್ಶಿಸುತ್ತದೆ.
* ಗಡಿಗಳನ್ನು ಮೀರಿದ ವಿಜ್ಞಾನ - S&T ಯಲ್ಲಿನ ಜಾಗತಿಕ ಸವಾಲುಗಳನ್ನು ಎದುರಿಸಲು ವಿಜ್ಞಾನಿಗಳು, ಸಂಶೋಧಕರು ಮತ್ತು ಸಂಸ್ಥೆಗಳ ನಡುವೆ ಅಂತರರಾಷ್ಟ್ರೀಯ ಸಹಯೋಗ, ಪಾಲುದಾರಿಕೆ ಮತ್ತು ಸಂವಾದಗಳ ವಿನಿಮಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
"ಗುವಾಹಟ್ಟಿಯ ಐಐಟಿಯಲ್ಲಿ ನಾಲ್ಕು ದಿನಗಳ ಇಂಡಿಯಾ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವ"
Published by Jyoti Angadi
07 ಡಿಸೆಂಬರ್ 2024