* ಭಾರತದ ಸಂಸ್ಕೃತಿ ಮತ್ತು ಆಧ್ಯಾತ್ಮಕ್ಕೆ ಹೊಸ ಮೈಲುಗಲ್ಲು ನಿರ್ಮಿಸುವ ಮಹತ್ವದ ಘಟನೆಯಾಗಿ, ಗೋವಾದ ಕಾಣಕೋಣೆಯಲ್ಲಿ ನಿರ್ಮಿಸಲಾದ ಜಗತ್ತಿನ ಅತೀ ಎತ್ತರದ ಶ್ರೀರಾಮನ ಮೂರ್ತಿಯನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಕಾರ್ಯಕ್ರಮವು ದೇಶದ ಸಾಂಸ್ಕೃತಿಕ ಪರಂಪರೆ, ಭಕ್ತಿ ಚಳವಳಿ, ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಮಹತ್ತರ ಉತ್ತೇಜನ ನೀಡುವಂತಿದೆ.
* ಕಾಣಕೋಣೆಯಲ್ಲಿರುವ ಪರ್ತಗಾಳಿ ಜೀವೋತ್ತಮ ಮಠವನ್ನು ಇಂದಿನ ದಿನಗಳಲ್ಲಿ “ದಕ್ಷಿಣ ಅಯೋಧ್ಯೆ” ಎಂದೇ ಗುರುತಿಸಲಾಗುತ್ತಿದೆ. ಈ ಮಠದ ಆವರಣದಲ್ಲಿ ಬಿಲ್ಲಿನಾಕಾರದ ಆದರ್ಶ ಧಾಮ್ (Model Spiritual Complex) ನಿರ್ಮಿಸಲಾಗಿದೆ. ಈ ಧಾಮ್‌ನ ಕೇಂದ್ರ ಆಕರ್ಷಣೆಯೇ ಇಂದು ಅನಾವರಣಗೊಳ್ಳುವ 77 ಅಡಿ ಎತ್ತರದ ಶ್ರೀರಾಮನ ಕಂಚಿನ ಮೂರ್ತಿ.
* ಶ್ರೀರಾಮ ಪ್ರತಿಮೆಯು ವಿಶೇಷವಾಗಿ 77 ಅಡಿ ಜಗತ್ತಿನಲ್ಲೇ ಅತೀ ಎತ್ತರದ ಶ್ರೀರಾಮ ಪ್ರತಿಮೆ ಹಾಗೂ ಸಂಪೂರ್ಣವಾಗಿ ಕಂಚಿನಿಂದ ನಿರ್ಮಿತವಾಗಿದೆ. ವಿಶಿಷ್ಟ ಶಿಲ್ಪಕಲೆ, ಮುಖಭಾವ, ಮತ್ತು ಧರ್ಮಶಾಸ್ತ್ರಗಳಿಗೆ ಅನುಗುಣವಾದ ನಿಖರ ವಿನ್ಯಾಸ.
* ಮೂರ್ತಿಯ ಆಧಾರದ ವೇದಿಕೆ ಬಿಲ್ಲಿನ ಆಕಾರದಲ್ಲಿ ನಿರ್ಮಿಸಲಾಗಿದೆ. ಶ್ರೀರಾಮನ ಧನುರ್ದಾರಿ ಸ್ವರೂಪವನ್ನು ಸೂಚಿಸುವುದರಿಂದ ಇದು ಅಂತಾರಾಷ್ಟ್ರೀಯ ಮಟ್ಟದ ಆಕರ್ಷಣೆ.
* ಭವ್ಯ ಆಧ್ಯಾತ್ಮಿಕ ಸಂಕೀರ್ಣ ಧ್ಯಾನ ಮಂದಿರ, ಪ್ರವಾಸಿಗರಿಗೆ ಮಾಹಿತಿ ಕೇಂದ್ರ, ಭಕ್ತರಿಗಾಗಿ ಸೌಲಭ್ಯಗಳು, ಯೋಗ–ಧ್ಯಾನ ಕೇಂದ್ರ, ಇವೆಲ್ಲವನ್ನು ಒಳಗೊಂಡ ಆಧುನಿಕ–ಸಾಂಪ್ರದಾಯಿಕ ಸಂಕಲನ.
* ಈ ಮೂರ್ತಿಯನ್ನು ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಬೆಂಗಳೂರಿನಲ್ಲಿ ಕೆಂಪೇಗೌಡರ ಮೂರ್ತಿಗಳನ್ನು ವಿನ್ಯಾಸಗೊಳಿಸಿದ ಪ್ರಖ್ಯಾತ ಶಿಲ್ಪಿ `ಪದ್ಮಭೂಷಣ' ಪುರಸ್ಕೃತ ರಾಮ ಸುತಾರ್ ಅವರೇ ಈ ಶ್ರೀರಾಮನ ಮೂರ್ತಿಯನ್ನು ನಿರ್ಮಿಸಿದ್ದಾರೆ.
* ಪ್ರಧಾನಿ ಮೋದಿ ಅವರಿಂದ ನಡೆಯುತ್ತಿರುವ ಈ ಲೋಕಾರ್ಪಣೆ ಕೇವಲ ಒಂದು ಕಾರ್ಯಕ್ರಮವಲ್ಲ; ಇದು ಸಾಂಸ್ಕೃತಿಕ ಪುನರುತ್ಥಾನದ ಸಂಕೇತ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಬಲವರ್ಧನೆ ರಾಮಾಯಣ ಆಸ್ಥೆಯ ಗೌರವ ಹಾಗೂ ರಾಷ್ಟ್ರದ ಪರಂಪರೆಯ ಆಚರಣೆ ಇದರಿಂದ ಕಾಣಕೋಣೆ ಮತ್ತು ಗೋವಾ ರಾಜ್ಯವು ಭವಿಷ್ಯದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಯಾತ್ರಿಕರು ಭೇಟಿ ನೀಡುವ ಮಹತ್ವದ ಆಧ್ಯಾತ್ಮಿಕ ತಾಣ ಆಗಲಿದೆ.
ಶುಕ್ರವಾರ, 28 ನವೆಂಬರ್ 2025
12:56 ಅಪರಾಹ್ನ
Daily PDF
ಜಗತ್ತಿನ ಅತೀ ಎತ್ತರದ ಶ್ರೀರಾಮನ ಮೂರ್ತಿ: ಪ್ರಧಾನಿಯವರಿಂದ ಲೋಕಾರ್ಪಣೆ
Authored by:
Yallamma G